Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕರಾವಳಿ ರಕ್ಷಣೆಯಲ್ಲಿ ಮಹತ್ವದ ಹಂತ: ASW ಮಾಹೆ ಅಧಿಕೃತ ಸೇರ್ಪಡೆ
17 ನವೆಂಬರ್ 2025
*
ಭಾರತೀಯ ನೌಕಾಪಡೆಯ ಸಮುದ್ರ ಭದ್ರತಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಹೊಸ ASW (Anti-Submarine Warfare) Shallow Water Craft ‘ಮಾಹೆ’ ನೌಕೆಯನ್ನು ನವೆಂಬರ್ 24ರಂದು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುತ್ತಿದೆ.
ಇದು ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ಹತ್ತಿಕ್ಕುವಲ್ಲಿ ಪರಿಣತವಾದ ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆ.
*
‘ಮಾಹೆ’ ನೌಕೆಯನ್ನು ಕೋಲ್ಕತ್ತಾದ Garden Reach Shipbuilders & Engineers (GRSE) ಸಂಸ್ಥೆ ASW Shallow Water Craft Project ಅಡಿಯಲ್ಲಿ ನಿರ್ಮಿಸಿದೆ.
ಈ ಯೋಜನೆಯಡಿ ಒಟ್ಟು 8 ನೌಕೆಗಳ ನಿರ್ಮಾಣ ನಡೆಯುತ್ತಿದ್ದು, ಮಾಹೆ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು. ನೌಕೆಯಲ್ಲಿ 70% ಕ್ಕೂ ಹೆಚ್ಚು ಸ್ವದೇಶಿ ಭಾಗಗಳನ್ನು ಬಳಸಿರುವುದು ‘Make in India’ ಮತ್ತು ‘ಆತ್ಮನಿರ್ಭರ ಭಾರತ’ ಗುರಿಗಳನ್ನು ಮತ್ತಷ್ಟು ಬಲಪಡಿಸುತ್ತದೆ.
* ಈ ನೌಕೆಯಲ್ಲಿರುವ
ಅತ್ಯಾಧುನಿಕ ಸೋನಾರ್ ವ್ಯವಸ್ಥೆ, ಸುಧಾರಿತ ರೇಡಾರ್, ನಿಖರ ನವಿಗೇಶನ್ ವ್ಯವಸ್ಥೆಗಳು
ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಜಲಾಂತರ್ಗಾಮಿ ಚಲನಗಳನ್ನು ದೂರದಿಂದಲೇ ಪತ್ತೆಮಾಡಿ ಕ್ರಮ ಕೈಗೊಳ್ಳುವ ಸಾಮರ್ಥ್ಯ ನೀಡುತ್ತವೆ. ಕರಾವಳಿ ಭದ್ರತೆ, ಬಂದರುಗಳ ರಕ್ಷಣಾ ಕಾರ್ಯಾಚರಣೆ, ಮತ್ತು ಸಮುದ್ರ ಮಾರ್ಗ ಸುರಕ್ಷತೆಯಲ್ಲಿ ಮಾಹೆಯು ಮಹತ್ವದ ಪಾತ್ರ ವಹಿಸಲಿದೆ.
*
INS Mahe
ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಏರಿಸುವ ಮೂಲಕ ಭಾರತವನ್ನು ಸಮುದ್ರ ರಕ್ಷಣೆಯಲ್ಲಿ ಸ್ವಾವಲಂಬಿ ಮತ್ತು ತಂತ್ರಜ್ಞಾನಾಧಾರಿತ ರಾಷ್ಟ್ರವಾಗಿ ರೂಪಿಸುತ್ತದೆ. ಇದರಿಂದ ಭಾರತದ ಜಲರಕ್ಷಣಾ ವ್ಯವಸ್ಥೆ, ಸಮುದ್ರ ವ್ಯಾಪಾರ ಮಾರ್ಗಗಳ ಸುರಕ್ಷತೆ ಮತ್ತು ಜಲಾಂತರ್ಗಾಮಿ ವಿರೋಧಿ ಸಾಮರ್ಥ್ಯಗಳು ವಿಸ್ತರಿಸಿಕೊಳ್ಳಲಿದೆ. ಇದು ಸಮುದ್ರ ಮಾರ್ಗಗಳ ಸುರಕ್ಷತೆಗೆ ಹಾಗೂ ದೇಶದ ಜಲವ್ಯಾಪಾರ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತದೆ
*
ಆಧುನಿಕ ರೇಡಾರ್
ಮತ್ತು
ನವಿಗೇಶನ್ ವ್ಯವಸ್ಥೆಗಳು
ನೌಕೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.
ನವೆಂಬರ್ 24ರಂದು ‘ಮಾಹೆ’ commissioning
ಆಗುವುದರಿಂದ, ಭಾರತೀಯ ನೌಕಾಪಡೆಯ ಚರಿತ್ರೆಯಲ್ಲಿ ಮತ್ತೊಂದು ಪ್ರಮುಖ ಅಧ್ಯಾಯ ಸೇರ್ಪಡೆಯಾಗುತ್ತದೆ.
* ಮಾಹೆ ನೌಕೆಯಲ್ಲಿ
ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ 70% ಕ್ಕೂ ಹೆಚ್ಚು
ಸ್ವದೇಶಿ ಉತ್ಫಾದನಾಂಶಗಳು ಬಳಸಲಾಗಿದೆ.
ಮಾಹೆ' ಪೌಂಡ್ಿಚೇರಿ ಕೇಂದ್ರಾಡಳಿತ
ಪ್ರದೇಶದ ಒಂದು ಕರಾವಳಿ ಭಾಗ.ಭಾರತೀಯ ನೌಕಾಪಡೆ ತನ್ನ ನೌಕೆಗಳಿಗೆ ಕರಾವಳಿ ನಗರ/ದ್ವೀಪ/ಪ್ರದೇಶಗಳ ಹೆಸರಿಡುವ ಪರಂಪರೆಯನ್ನು ಅನುಸರಿಸಿದೆ.
* ASW Shallow Water ಕ್ರಾಫ್ಟ್ ಯೋಜನೆಯಡಿ ನಿರ್ಮಿಸಲಾದ 8 ನೌಕೆಗಳು:
- INS Arnala
- INS Androth
- INS Kiltan (ಸುಧಾರಿತ ರೂಪ)
- INS Kozhikode
- INS Karwar
- INS Mahe
- INS Tonk
- INS ಮಾಲ್ವನ್
* ಭಾರತದ ಸಮುದ್ರ ಭದ್ರತೆಗೆ ‘ಮಾಹೆ’ ನೌಕೆಯ ಮಹತ್ವ:
1. ಜಲಾಂತರ್ಗಾಮಿ ಭಯೋತ್ಪಾದನೆಗೆ ದೊಡ್ಡ ತಡೆ
2. ಕರಾವಳಿ ಭದ್ರತೆ ಬಲಪಡಿಕೆ
3. ಬಂದರುಗಳ ಸುರಕ್ಷತೆ
4. ತಂತ್ರಜ್ಞಾನದ ಸ್ವಾವಲಂಬನೆ
Take Quiz
Loading...