Job Description: ➤ ಭಾರತೀಯ ನೌಕಾಪಡೆಯ ಕರಾವಳಿ ಭದ್ರತೆ ಹಾಗೂ ಜಲಾಂತರ್ಗಾಮಿ ನಿಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲು ತಲುಪಲಾಗಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (Cochin Shipyard Limited - CSL) ನಿರ್ಮಿಸುತ್ತಿರುವ ಎಂಟು ಸಬ್‌ಮರಿನ್ ನಿಗ್ರಹ ಶಾಲೋ ವಾಟರ್ ಕ್ರಾಫ್ಟ್ (Anti-Submarine Warfare Shallow Water Craft - ASW SWC) ಸರಣಿಯ 7ನೇ ನೌಕೆ 'ಮಚಲಿಪಟ್ಟಣಂ' (Machilipatnam) ಅನ್ನು ಕೊಚ್ಚಿಯಲ್ಲಿ ನೌಕಾಪಡೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ಬಂದರು ನಗರವಾದ 'ಮಚಲಿಪಟ್ಟಣಂ' ಹೆಸರನ್ನು ಈ ಅತ್ಯಾಧುನಿಕ ಯುದ್ಧನೌಕೆಗೆ ಇಡಲಾಗಿದೆ.➤ ಮಚಲಿಪಟ್ಟಣಂ' ನೌಕೆಯ ತಾಂತ್ರಿಕ ವೈಶಿಷ್ಟ್ಯಗಳು: ಆತ್ಮನಿರ್ಭರ ಭಾರತದ ಹೆಜ್ಜೆ: ಈ ಯುದ್ಧನೌಕೆಯನ್ನು ಶೇಕಡಾ 80 ಕ್ಕಿಂತ ಹೆಚ್ಚು ದೇಶೀಯ ಉಪಕರಣ ಹಾಗೂ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಇದು ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಕಲ್ಪನೆಗೆ ಬಲ ತಂದಿದೆ. ಸಾಗರ ಸೌಂಡ್ ಶೋಧ ತಂತ್ರಜ್ಞಾನ: ಆಳವಿಲ್ಲದ ಕರಾವಳಿ ನೀರಿನಲ್ಲಿ (Shallow Waters) ಸಡನ್ ಆಗಿ ಅಡಗಿಕೊಳ್ಳುವ ಶತ್ರು ಜಲಾಂತರ್ಗಾಮಿಗಳನ್ನು (Submarines) ಪತ್ತೆಹಚ್ಚಲು ಅತ್ಯಾಧುನಿಕ ಸೋನಾರ್ (Sonar) ವ್ಯವಸ್ಥೆಯನ್ನು ಹೊಂದಿವೆ. ಆಯುಧ ಹಾಗೂ ರಕ್ಷಣಾ ವ್ಯವಸ್ಥೆ: ಹಗುರವಾದ ಟಾರ್ಪಿಡೋಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳು ಮತ್ತು ಆಂಟಿ-ಸಬ್‌ಮರಿನ್ ಮೈನ್‌ಗಳನ್ನು (Mines) ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ವೇಗ ಮತ್ತು ಚಾಲನೆ: ಡೀಸೆಲ್ ಎಂಜಿನ್ ಹಾಗೂ ವಾಟರ್ ಜೆಟ್ ಪ್ರೊಪಲ್ಷನ್ ವ್ಯವಸ್ಥೆಯ ಮೂಲಕ ಅತ್ಯಂತ ವೇಗವಾಗಿ (25 ನಾಟ್ಸ್) ಕಾರ್ಯಾಚರಣೆ ನಡೆಸಬಲ್ಲದು. ➤ ASW-SWC ಯೋಜನೆಯ ಹಿನ್ನೆಲೆ: ಭಾರತೀಯ ನೌಕಾಪಡೆಯು ತನ್ನ ಹಳೆಯ ಅಭಯ್ ವರ್ಗದ (Abhay-class) ಜಲಾಂತರ್ಗಾಮಿ ನಿಗ್ರಹ ನೌಕೆಗಳಿಗೆ ಪರ್ಯಾಯವಾಗಿ 16 ಅತ್ಯಾಧುನಿಕ ASW-SWC ನೌಕೆಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿತ್ತು. 8 ನೌಕೆಗಳು: ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ (GRSE), ಕೋಲ್ಕತ್ತಾ 8 ನೌಕೆಗಳು: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL), ಕೊಚ್ಚಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಚೀನಾದ ನೌಕಾಪಡೆಯ ಸಮ್ಮುಖ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತದ ದೀರ್ಘ ಕರಾವಳಿ ತೀರ (7,516.6 ಕಿ.ಮೀ) ಹಾಗೂ ಬಂದರುಗಳ ಭದ್ರತೆಗೆ ಈ ನೌಕೆಗಳ ಸೇರ್ಪಡೆ ಅತ್ಯಂತ ಪ್ರಮುಖವೆನಿಸಿದೆ.