Job Description: ➤ ಭಾರತೀಯ ರೈಲ್ವೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಇತ್ತೀಚೆಗೆ ಐತಿಹಾಸಿಕ ಕ್ರಾಂತಿಯೊಂದು ಸಂಭವಿಸಿದೆ. ಪರಿಸರಸ್ನೇಹಿ ಮತ್ತು ಶೂನ್ಯ ಇಂಗಾಲದ (Net-Zero Carbon Emission) ಗುರಿ ತಲುಪಲು ಭಾರತ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ (India's First Hydrogen Train) ಹಸಿರು ನಿಶಾನೆ ಸಿಕ್ಕಿದ್ದು, ಅದರೊಂದಿಗೆ ರಸ್ತೆ ಸಾರಿಗೆಯಲ್ಲೂ 10 ಪ್ರಮುಖ ಮಾರ್ಗಗಳಲ್ಲಿ ಹೈಡ್ರೋಜನ್ ಇಂಧನ ವಾಹನಗಳ ಪೈಲಟ್ ಯೋಜನೆಗೆ ಚಾಲನೆ ನೀಡಲಾಗಿದೆ.➤ ಭಾರತದ ಮೊದಲ ಹೈಡ್ರೋಜನ್ ರೈಲು: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 17 ರಂದು ಹರಿಯಾಣದ ಜಿಂದ್ - ಸೋನಿಪತ್ ಮಾರ್ಗದಲ್ಲಿ ಚಾಲನೆ ನೀಡಲಿರುವ, 1,200 KW ಸಾಮರ್ಥ್ಯದ ಸ್ವದೇಶಿ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಹೊಂದಿರುವ ಭಾರತದ ಮೊದಲ 10 ಬೋಗಿಗಳ ಹೈಡ್ರೋಜನ್ ರೈಲು, ಪ್ರಸ್ತುತ ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.➤ ದೇಶದ 10 ಮಾರ್ಗಗಳಲ್ಲಿ ಹೈಡ್ರೋಜನ್ ಸಾರಿಗೆ ಪೈಲಟ್ ಯೋಜನೆ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಟಾಟಾ ಮೋಟಾರ್ಸ್ ಮತ್ತು ರಿಲಯನ್ಸ್‌ನಂತಹ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ, ₹208 ಕೋಟಿ ವೆಚ್ಚದಲ್ಲಿ ಒಟ್ಟು 37 ಹೈಡ್ರೋಜನ್ ಚಾಲಿತ ಬಸ್ ಮತ್ತು ಟ್ರಕ್‌ಗಳನ್ನು ದೇಶದ 10 ಪ್ರಮುಖ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಿದೆ.➤ ಹೈಡ್ರೋಜನ್ ಸಾರಿಗೆಯ 10 ಪ್ರಮುಖ ಮಾರ್ಗಗಳು: ಗ್ರೇಟರ್ ನೋಯ್ಡಾ - ದೆಹಲಿ - ಆಗ್ರಾ ಪುಣೆ - ಮುಂಬೈ ಅಹಮದಾಬಾದ್ - ವಡೋದರಾ - ಸೂರತ್ ಭುವನೇಶ್ವರ - ಕೊನಾರ್ಕ್ - ಪುರಿ ಸಾಹಿಬಾಬಾದ್ - ಫರಿದಾಬಾದ್ - ದೆಹಲಿ ಜಮ್ಶೆಡ್‌ಪುರ - ಕಳಿಂಗ ನಗರ ತಿರುವನಂತಪುರಂ - ಕೊಚ್ಚಿ ಕೊಚ್ಚಿ - ಎಡಪಲ್ಲಿ ಜಾಮ್‌ನಗರ - ಅಹಮದಾಬಾದ್ NH-16 ವಿಶಾಖಪಟ್ಟಣಂ - ಬಯ್ಯಾವರಂ ➤ ಹೈಡ್ರೋಜನ್ ಫ್ಯುಯೆಲ್ ಸೆಲ್ (Hydrogen Fuel Cell) ತಂತ್ರಜ್ಞಾನವು ಹೈಡ್ರೋಜನ್ ಮತ್ತು ಆಮ್ಲಜನಕದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಾನಿಕಾರಕ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುವುದಿಲ್ಲ. ಇದರ ಏಕೈಕ ಬೈ-ಪ್ರಾಡಕ್ಟ್ (ಉಪ ಉತ್ಪನ್ನ) ಎಂದರೆ ನೀರಿನ ಆವಿ (Water Vapour) ಮತ್ತು ಶಾಖ ಮಾತ್ರ. ಹೀಗಾಗಿ ಇದು 100% ಪರಿಸರಸ್ನೇಹಿಯಾಗಿದೆ. KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ