* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕಾಗಿ ಉನ್ನತ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯನ್ನು ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯಲ್ಲಿ ಮಾಡಿದರು. ಈ ಸಭೆಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಸಹ ಹಾಜರಿದ್ದರು.# ಪ್ರಧಾನಮಂತ್ರಿ ಘೋಷಿತ ಪ್ರಮುಖ ಅಂಶಗಳು:* ಮಾನವ-ಪ್ರಾಣಿ ಸಂಘರ್ಷ ತಡೆಗಟ್ಟಲು ಅಧ್ಯಯನ ಕೇಂದ್ರ ಸ್ಥಾಪನೆ.* ದೇಶದ ಮೊದಲ ಡಾಲ್ಫಿನ್ ಸಮೀಕ್ಷಾ ವರದಿ ಬಿಡುಗಡೆ – ಭಾರತದಲ್ಲಿ ಒಟ್ಟು 6,327 ಡಾಲ್ಫಿನ್ಗಳು ಪತ್ತೆಯಾಗಿದೆ.* 2024 ಅಕ್ಟೋಬರ್ನಲ್ಲಿ ‘ಪ್ರಾಜೆಕ್ಟ್ ಡಾಲ್ಫಿನ್’ ಅಡಿಯಲ್ಲಿ 8,000 ಕಿ.ಮೀ ವ್ಯಾಪ್ತಿಯ ಸಮೀಕ್ಷೆ ನಡೆಸಲಾಯಿತು.*28 ನದಿಗಳ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಡಾಲ್ಫಿನ್ ಕಂಡುಬಂದಿದೆ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಡಾಲ್ಫಿನ್ಗಳು ಕಂಡುಬಂದಿವೆ. * ಈ ಅಧ್ಯಯನ ಕೇಂದ್ರ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಮಹತ್ತರ ಯೋಜನೆ ಆಗಿದ್ದು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ದೇಶದ ಪ್ರಮುಖ ಹೆಜ್ಜೆಯಾಗಿದೆ.