* ಕಳೆದ ದಶಕದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿರುವ ಟಾಪ್ 10 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಚೀನಾದ ಶೆನ್ಝೆನ್ ಮೊದಲ ಸ್ಥಾನದಲ್ಲಿದ್ದು, ಸ್ಕಾಟ್ಸ್ಡೇಲ್ ಎರಡನೇ ಸ್ಥಾನ ಪಡೆದಿದೆ.* ಬೆಂಗಳೂರು ನಗರದಲ್ಲಿ ಶೇ.120ರ ದರದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಈ ಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದಿದೆ. ಇಲ್ಲಿನ ಕೋಟ್ಯಧಿಪತಿಗಳ ಸಂಖ್ಯೆ ಈಗ 13,600ಕ್ಕೆ ತಲುಪಿದೆ.* ಭಾರತದ ಇನ್ನೂ ಎರಡು ಪ್ರಮುಖ ನಗರಗಳು, ದೆಹಲಿ (14ನೇ ಸ್ಥಾನ) ಮತ್ತು ಮುಂಬೈ (18ನೇ ಸ್ಥಾನ) ಸಹ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿಯಲ್ಲಿ ಶೇ.82 ಮತ್ತು ಮುಂಬೈನಲ್ಲಿ ಶೇ.69ರಷ್ಟು ಬೆಳವಣಿಗೆ ಕಂಡುಬಂದಿದೆ.* ಶೆನ್ಝೆನ್ನಲ್ಲಿ ಶೇ.142ರ ಬೆಳವಣಿಗೆಯೊಂದಿಗೆ 50,800 ಕೋಟ್ಯಧಿಪತಿಗಳು ಇದ್ದಾರೆ. ಸ್ಕಾಟ್ಸ್ಡೇಲ್ ಲ್ಲಿ ಶೇ.125ರ ಬೆಳವಣಿಗೆ ಕಂಡುಬಂದಿದ್ದು, 14,800 ಕೋಟ್ಯಧಿಪತಿಗಳು ಇರುವರು.* ಶೆನ್ಝೆನ್ನಲ್ಲಿ 800 ಕೋಟಿ ಕ್ಕಿಂತ ಹೆಚ್ಚು ಆಸ್ತಿ ಹೊಂದಿರುವವರು 156 ಮಂದಿ, 8500 ಕೋಟಿಗಿಂತ ಹೆಚ್ಚು ಆಸ್ತಿಯವರ ಸಂಖ್ಯೆ 22. ಬೆಂಗಳೂರಿನಲ್ಲಿ ಈ ಸಂಖ್ಯೆಗಳು ಕ್ರಮವಾಗಿ 43 ಮತ್ತು 8.* ವ್ಯಕ್ತಿಗಳು ಉತ್ತಮ ಅವಕಾಶಗಳು ಮತ್ತು ಆರ್ಥಿಕ ಬೆಳವಣಿಗೆಯ ಕಾರಣದಿಂದಾಗಿ ನ್ಯೂಯಾರ್ಕ್, ಹಾಂಗ್ಕಾಂಗ್ನಂಥ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ತಂತ್ರಜ್ಞಾನ ಅಭಿವೃದ್ಧಿ ಮತ್ತು ಜನಸ್ನೇಹಿ ತೆರಿಗೆ ನೀತಿಯೂ ಈ ಬೆಳವಣಿಗೆಗೆ ಕಾರಣವಾಗಿದೆ.* ಭಾರತದ ಮೂರು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ದೇಶದ ಆರ್ಥಿಕ ಶಕ್ತಿಯ ಬೆಳವಣಿಗೆಗೆ ಸ್ಪಷ್ಟ ಸಂಕೇತವಾಗಿದೆ. ಬೆಂಗಳೂರು ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ದೇಶದ ಟೆಕ್ ಹಬ್ ಆಗಿಯೂ ಮಿಂಚುತ್ತಿದೆ.