* ದೇಶದ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾದ ಬಲ್ದೋಟಾ ಉಕ್ಕು ಸಮೂಹ ಸಂಸ್ಥೆ ಕರ್ನಾಟಕದಲ್ಲಿ ಅತಿ ದೊಡ್ಡ ಉಕ್ಕು ಕಾರ್ಖಾನೆ ಸ್ಥಾಪಿಸುವ ಮೂಲಕ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ.* ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಬಲ್ದೋಟಾ ಸಮೂಹ ಸಂಸ್ಥೆಯು ₹54,000 ಕೋಟಿ ವೆಚ್ಚದಲ್ಲಿ 10.5 ದಶ ಲಕ್ಷ ಟನ್ ಉತ್ಪಾದನಾ ಸಾಮರ್ಥ್ಯದ ಸಮಗ್ರ ಉಕ್ಕಿನ ಕೈಗಾರಿಕೆ ಸ್ಥಾಪಿಸಲಿದೆ.* ಬಲ್ದೋಟಾ ಸಮೂಹ ಸಂಸ್ಥೆಯು ಮಂಗಳವಾರ (ಫೆ.11) ಬೆಂಗಳೂರು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಬಲ್ದೋಟಾ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಕುಮಾರ್ ತಿಳಿಸಿದ್ದಾರೆ.* ಕೊಪ್ಪಳ ಜಿಲ್ಲೆಯಲ್ಲಿ ಬಲ್ದೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಬಲ್ದೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ. * ಬಲ್ದೋಟಾ ಸಮೂಹ ಸಂಸ್ಥೆ ಖನಿಜ ಅನ್ವೇಷಣೆ, ಗಣಿಗಾರಿಕೆ, ಕೈಗಾರಿಕಾ ಅನಿಲ ಮತ್ತು ಪೆಲೆಟ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.* ಬಲ್ಲೋಟಾ ಸಂಸ್ಥೆ 70 ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೇಂದ್ರ ಸರ್ಕಾರದಿಂದ 6 ವರ್ಷಗಳಷ್ಟು ಪಂಚತಾರಾ ರೇಟಿಂಗ್ ಪ್ರಶಸ್ತಿ ಪಡೆದಿದೆ. ಬಲ್ಲೋಟಾ ಸಂಸ್ಥೆಯು 20 ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ನಡೆಸಿದೆ.