* ಕೋವಿಡ್ -19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವ ನ್ಯೂಕ್ಲಿಯೊಸೈಡ್ ಬೇಸ್ ಮಾರ್ಪಾಡುಗಳ ಕುರಿತಾದ ಸಂಶೋಧನೆಗಳಿಗಾಗಿ ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್‌ಮನ್‌ಗೆ 2023 ರ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.* ಕರಿಕೊ ಅವರು 1955 ರಲ್ಲಿ ಹಂಗೇರಿಯಲ್ಲಿ ಜನಿಸಿದ್ದರು, ಇವರು ಹಂಗೆರಿಯ ಸಾಗಾನ್ ವಿಶ್ವವಿದ್ಯಾಲಯ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ, ವೈಸ್‌ಮನ್ ಅವರು 1959 ರಲ್ಲಿ ಯುಎಸ್ಎಯ ಮ್ಯಾಸಚೂಸೆಟ್ಸ್ನಲ್ಲಿ ಜನಿಸಿದ್ದರು, ಇವರು   ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಈ ಇಬ್ಬರು ಜೊತೆಯಾಗಿ ಲಸಿಕೆ ಅಭಿವೃದ್ಧಿಗೆ ಸಂಶೋಧನೆ ನಡೆಸಿದ್ದರು.*  ಕರಿಕೋ ಮತ್ತು ವೈಸ್ ಮನ್ ಅವರು 2005 ರ ಅಧ್ಯಯನದ ಆಧಾರದ ಮೇಲೆ ಎಂಆರ್‌ ಎನ್‌ ಎ ತಂತ್ರಜ್ಞಾನದ ಸಹಾಯದಿಂದ ಫಿಜರ್-ಬಯೋಟೆಕ್ ಮತ್ತು ಮಾಡರ್ನಾ ಮೊದಲ ಕರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.* ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಕಂಡುಹಿಡಿಯಲು ಬಳಸಲಾಗುತ್ತಿದೆ* ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯ ಜೊತೆಗೆ ಎಂಆರ್ ಎನ್ ಎ ಹೇಗೆ ವರ್ತಿಸುತ್ತದೆ ಎಂಬುವುದನ್ನು ಅರ್ಥ ಮಾಡಿಕೊಳ್ಳುವ ಮೂಲಭೂತ ಗ್ರಹಿಕೆಯಲ್ಲಿ ಈ ಎ ಸಂಶೋಧನೆ ಕ್ರಾಂತಿ ಕಾರಿ ಬದಲಾವಣೆಯನ್ನು ತಂದಿದೆ.