* ಕೋವಿಡ್ ವ್ಯಾಕ್ಸಿನ್ ಗಳಲ್ಲಿ ಒಂದಾದ ಕೋವಿಶಿಲ್ಡ್ ಲಸಿಕೆಯನ್ನು ಕೋಟ್ಯಾಂತರ ಜನರು ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡಿದ್ದಾರೆ. ಆ ಕೋವಿಶಿಲ್ಡ್ ಲಸಿಕೆ ಗಂಭೀರವಾದ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆರೋಪ ಕೇಳಿ ಬಂದ ಕೂಡಲೇ ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ದೆಹಲಿಯ ಆರೋಗ್ಯ ಸಚಿವ ಸೌರಭ ಭಾರಧ್ವಾಜ್ ಅವರು ತಿಳಿಸಿದ್ದಾರೆ.* ಜರ್ಮನಿ, ಫ್ರಾನ್ಸ್, ಸ್ಪೆನ್, ಫಿನ್ಲ್ಯಾಂಡ್, ನಾರ್ವೆ ಮತ್ತು ಡೆನ್ಮಾರ್ಕ್ ಯುರೋಪಿಯನ್ ದೇಶಗಳು ಕೋವಿಶಿಲ್ಡ್ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. * ಬ್ರಿಟನ್ ಕೇಂದ್ರ ಕಚೇರಿಯನ್ನು ಹೊಂದಿರುವ ಔಷಧ ಕಂಪನಿಗಳಾದ ಆಸ್ಟ್ರಾಜನಿಕಾ, ಕೋವಿಡ್ ಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. * ಕೋವಿಡ್ ಶೀಲ್ಡ್ ಪ್ರಕರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ ಲೇಟ್ ಗಳ ಸಂಖ್ಯೆ ಕಡಿಮೆ ಸೈಟೊಪೆನಿಯಾ ಸಿಂಡ್ರೋಮ್ (ಟಿ ಟಿ ಎಸ್) ಅಡ್ಡ ಪರಿಣಾಮದ ತೀವ್ರತೆಗೆ ಕಾರಣವಾಗಬಹುದು ಎಂದು ನ್ಯಾಯಾಲಯು ಒಪ್ಪಿಕೊಂಡಿದೆ.