* ಕೋಲಾರ ಮೂಲದ 38 ವರ್ಷದ ಮಹಿಳೆಯೊಬ್ಬರಲ್ಲಿ ವಿಜ್ಞಾನಕ್ಕೂ ಸವಾಲಾಗುವಂತ ಅಪರೂಪದ ರಕ್ತದ ಗುಂಪು ಪತ್ತೆಯಾಗಿದೆ. ಹೃದಯ ಶಸ್ತ್ರಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.* ಮಹಿಳೆಯಲ್ಲಿ ಪತ್ತೆಯಾದ ರಕ್ತದ ಗುಂಪು ಓ ಆರ್ಹೆಚ್+ (O RH+) ಎಂದು ಗುರುತಿಸಲ್ಪಟ್ಟಿದ್ದು, ಅದು ಯಾವ ಸಾಮಾನ್ಯ ರಕ್ತದ ಗುಂಪಿಗೂ ಹೊಂದಿಕೆಯಾಗಿಲ್ಲ. ಇದರಿಂದಾಗಿ ವೈದ್ಯರು ತಕ್ಷಣವೇ ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರು ಟಿಟಿಕೆ ರಕ್ತ ಕೇಂದ್ರಕ್ಕೆ ಕಳುಹಿಸಿದರು.* ಅಲ್ಲಿ ಸುಧಾರಿತ ಪರೀಕ್ಷೆಗಳಿಂದ ಮಹಿಳೆಯ ರಕ್ತ ‘ಪ್ಯಾನ್ರಿಯಾಕ್ಟಿವ್’ (pan-reactive) ಆಗಿದ್ದು, ಯಾವುದೇ ಡೊನರ್ ರಕ್ತಕ್ಕೂ ಹೊಂದಿಕೆಯಾಗದವೆಯೆಂದು ದೃಢಪಟ್ಟಿದೆ. ಆಕೆಯ ಕುಟುಂಬದ 20 ಜನರ ರಕ್ತದ ಮಾದರಿಯನ್ನೂ ಪರೀಕ್ಷಿಸಲಾಗಿತ್ತು, ಆದರೆ ಯಾವುದೇ ಹೊಂದಿಕೆ ಕಂಡುಬಂದಿಲ್ಲ.* ವೈದ್ಯರು ಕುಟುಂಬದ ಸಹಕಾರದಿಂದ ರಕ್ತದ ಅಗತ್ಯವಿಲ್ಲದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಧ್ಯಮಗಳಿಂದಲೇ ವಿವರ ತಿಳಿದುಕೊಂಡಿರುವುದಾಗಿ ಹೇಳಿದ್ದಾರೆ.