* ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ಉತ್ಪಾದನಾ ಘಟಕವು ಕರ್ನಾಟಕದ ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ. * ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (TASL) ಮತ್ತು ಯುರೋಪಿಯನ್ ವಿಮಾನ ನಿರ್ಮಾಣ ದೈತ್ಯ ಏರ್ಬಸ್ ಸಹಯೋಗದಿಂದ ಸ್ಥಾಪನೆಯಾಗುತ್ತಿರುವ ಈ ಘಟಕದಲ್ಲಿ ಜನಪ್ರಿಯ ಎಚ್125 ಹೆಲಿಕಾಪ್ಟರ್ಗಳನ್ನು ತಯಾರಿಸಲಾಗುವುದು.* ಈ ಘಟಕವು ಪ್ರಾರಂಭದಲ್ಲಿ ವಾರ್ಷಿಕ 10 ಹೆಲಿಕಾಪ್ಟರ್ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು, ಮುಂದಿನ 20 ವರ್ಷಗಳಲ್ಲಿ 500 ಹೆಲಿಕಾಪ್ಟರ್ಗಳಿಗೆ ಬೇಡಿಕೆ ಇರಬಹುದು ಎಂದು ಅಂದಾಜಿಸಲಾಗಿದೆ.* ಇದರಿಂದ ಭಾರತೀಯ ವಾಯುಸೇನೆ ಮತ್ತು ನೆರೆಯ ದೇಶಗಳಿಗೆ ಪೂರೈಕೆ ಮಾಡಲಾಗುತ್ತದೆ.* ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ಪೈಪೋಟಿಯನ್ನು ಮೀರಿ, ಕರ್ನಾಟಕಕ್ಕೆ ಈ ಯೋಜನೆ ಬಂದಿದ್ದು, ರಾಜ್ಯದಲ್ಲಿರುವ ಬಲವಾದ ಏರೋಸ್ಪೇಸ್ ಪರಿಸರ ವ್ಯವಸ್ಥೆ ಮುಖ್ಯ ಕಾರಣವಾಗಿದೆ.* ರಾಜ್ಯ ಸರ್ಕಾರ ಭೂಮಿ, ಬಂಡವಾಳ ಹೂಡಿಕೆ ಮತ್ತು ತೆರಿಗೆಗಳಲ್ಲಿ ರಿಯಾಯಿತಿಗಳನ್ನು ಒದಗಿಸಿದೆ.* ಈ ಘಟಕದಿಂದಾಗಿ ಕರ್ನಾಟಕದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮತ್ತಷ್ಟು ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.