* ಅಮೆರಿಕದ 21 ವರ್ಷದ ಕೊಕೊ ಗಾಫ್ ಅವರು 2024ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.* ವಿಶ್ವ ನಂ.1 ಅರೈನಾ ಸಬಲೆಂಕಾ ವಿರುದ್ಧ 6-7, 6-2, 6-4 ಸೆಟ್ಗಳಿಂದ ಜಯಿಸಿ ಅವರು ಈ ಸಾಧನೆ ಮಾಡಿದ್ದಾರೆ.* 2015ರ ಸೆರೆನಾ ವಿಲಿಯಮ್ಸ್ ನಂತರ ಇದೇ ಮೊದಲ ಬಾರಿಗೆ ಅಮೆರಿಕದ ಮಹಿಳಾ ಆಟಗಾರ್ತಿ ಫ್ರೆಂಚ್ ಓಪನ್ ಗೆದ್ದಿದ್ದಾರೆ. 2023ರಲ್ಲಿ ಯುಎಸ್ ಓಪನ್ ಗೆದ್ದ ಗಾಫ್, ಇದುವರೆಗೆ 2 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗಳಿಸಿದ್ದಾರೆ.* ಫ್ರೆಂಚ್ ಓಪನ್ ಪುರುಷರ ಸೆಮಿಫೈನಲ್ನಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್, ಇಟಲಿಯ ಯಾನಿಕ್ ಸಿನ್ನರ್ ವಿರುದ್ಧ ಸೋತು 25ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಕನಸು ಕೈಚೆಲ್ಲಿದರು. ಇದು ಅವರ ಕೊನೆಯ ಫ್ರೆಂಚ್ ಓಪನ್ ಆಗಬಹುದೆಂಬ ಭಾವೋದ್ವೇಗದ ಮಾತು ಅವರು ತಿಳಿಸಿದರು.* ನಾರ್ವೆ ಚೆಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಡಿ. ಗುಕೇಶ್ ಅಂತಿಮ ಸುತ್ತಿನಲ್ಲಿ ಫ್ಯಾಬಿಯಾನೋ ಕರುವಾನ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡರು.* ಮ್ಯಾಗ್ನಸ್ ಕಾರ್ಲ್ಸನ್ 7ನೇ ಬಾರಿಗೆ ಪ್ರಶಸ್ತಿ ಗೆದ್ದರು. ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಮತ್ತು ವೈಶಾಲಿಗೂ ಪ್ರಶಸ್ತಿ ಕೈ ಸೇರಲಿಲ್ಲ.