* ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಕ್ಕೊ ವಿಶ್ವಕಪ್ ಟೂರ್ನಿಯಲ್ಲಿ ಮಹಿಳೆಯರ ವಿಭಾಗದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎದುರು ಭಾರತದ ಅಟಗಾರ್ತಿಯರು ಜಯಸಾಧಿಸಿದ್ದಾರೆ.* ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಭಾರತ ತಂಡವು 175-18ರ ಭಾರಿ ಅಂತರದಿಂದ ಜಯಗಳಿಸಿತು.* ಭಾರತದ ಬಿ. ಚೈತ್ರಾ, ಮೀರು ಮತ್ತು ನಾಯಕಿ ಪ್ರಿಯಾಂಕಾ ಇಂಗೈ ಅವರು ಗೆಲುವಿನ ರೂವಾರಿಗಳಾದರು. ಅದರಲ್ಲಿ ಚೈತ್ರಾ ಅವರು ಕರ್ನಾಟಕದ ಅಟಗಾರ್ತಿಯಾಗಿದ್ದಾರೆ.* ಪಂದ್ಯದ ಆರಂಭದಲ್ಲಿಯೇ ಈ ಮೂವರು ಆಟಗಾರ್ತಿಯರು ಗೆಲುವಿಗೆ ಭದ್ರ ಅಡಿಪಾಯ ಹಾಕಿದರು. ಈ ಉತ್ತಮ ಆರಂಭದಿಂದಾಗಿ ತಂಡದ ಗೆಲುವಿನ ಹಾದಿಯು ಸರಾಗವಾಯಿತು.* ಪುರುಷರ ವಿಭಾಗದಲ್ಲಿ ಭಾರತದ ತಂಡವು 64-34 ಅಂತರದಿಂದ ಬ್ರೆಜಿಲ್ ವಿರುದ್ಧ ಜಯ ಸಾಧಿಸಿತು.