* ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ, ಕರ್ನಾಟಕದ ಎಸ್.ಪಿ. ಕೊಠಾರಿಯವರು ಅಮೆರಿಕದ ಖಜಾನೆ ಇಲಾಖೆಯ ಆರ್ಥಿಕ ನೀತಿ ಕಚೇರಿಯ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.* ಅವರು ಪ್ರಸ್ತುತ ಎಂಐಟಿ ಮ್ಯಾನೇಜ್ಮೆಂಟ್ ಸ್ಕೂಲ್ನಲ್ಲಿ ಅಕೌಂಟಿಂಗ್ ಮತ್ತು ಫೈನಾನ್ಸ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.* ಕೊಠಾರಿಯವರು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಭಾರತದ ಮೊದಲ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರ ಪ್ರಾರಂಭ ಹಾಗೂ ಮ್ಯೂಚುವಲ್ ಫಂಡ್ ವ್ಯಾಪಾರ ವೇದಿಕೆಯ ವಿಸ್ತರಣೆ ಸೇರಿದಂತೆ ಅನೇಕ ಪ್ರಮುಖ ನಿರ್ಧಾರಗಳಲ್ಲಿ ಪಾಲ್ಗೊಂಡಿದ್ದರು. * ಅಮೆರಿಕದ ವಿಡಿಯೋ ಗೇಮ್ ತಂತ್ರಜ್ಞಾನದ ಕಂಪನಿ ವೇಲನ್ ನ ಸಂಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.* ಅವರಿಗೆ 2019ರಲ್ಲಿ ಗೌರವ ಡಾಕ್ಟರೇಟ್ ಪದವಿ, 2020ರಲ್ಲಿ ಪದ್ಮಶ್ರೀ ಪ್ರಶಸ್ತಿ, ಹಾಗೂ ಅಂತರರಾಷ್ಟ್ರೀಯ ಅಕೌಂಟಿಂಗ್ ಸಂಸ್ಥೆಗಳಿಂದ ಹಲವಾರು ಗೌರವಗಳು ಲಭಿಸಿವೆ.* ಕಲಬುರಗಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಕೊಠಾರಿಯವರು, ಬಿಐಟಿಎಸ್ ಪಿಲಾನಿ, ಐಐಎಂ ಅಹಮದಾಬಾದ್ ಮತ್ತು ಅಮೆರಿಕಾದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.* ಈ ಹಿಂದೆ ಯುಎಸ್ ಸೆಕ್ಯುರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಅವರ ಈ ಸಾಧನೆ ಕರ್ನಾಟಕ ಹಾಗೂ ಭಾರತದ ಹೆಮ್ಮೆಯನ್ನು ಹೆಚ್ಚಿಸಿದೆ.