* ಐಸಿಐಸಿಐ ಬ್ಯಾಂಕ್ ಮಹಾನಗರ ಹಾಗೂ ನಗರ ಪ್ರದೇಶಗಳ ಉಳಿತಾಯ ಖಾತೆ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ₹50 ಸಾವಿರಕ್ಕೆ ಹೆಚ್ಚಿಸುವ ಹಳೆಯ ನಿರ್ಧಾರದಿಂದ ಹಿಂದೆ ಸರಿದಿದೆ.* ಹೊಸ ನಿಯಮದ ಪ್ರಕಾರ, ಈ ಪ್ರದೇಶಗಳ ಗ್ರಾಹಕರು ಈಗ ₹15 ಸಾವಿರ ಇರಿಸಿದರೆ ಸಾಕು. ಈ ನಿಯಮ ಆಗಸ್ಟ್ 1ರ ನಂತರ ಖಾತೆ ತೆರೆದವರಿಗೆ ಅನ್ವಯಿಸುತ್ತದೆ.* ಮಂಗಳವಾರ(ಆಗಸ್ಟ್ 12) ಬಿಡುಗಡೆ ಮಾಡಿದ ಪರಿಷ್ಕೃತ ನಿಯಮಾವಳಿಗಳ ಪ್ರಕಾರ, ಅರೆ ನಗರ ಪ್ರದೇಶಗಳ ಗ್ರಾಹಕರು ₹7,500 ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರು ₹2,500 ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ಉಳಿಸಬೇಕಾಗಿದೆ.* ಬ್ಯಾಂಕ್ ಹೇಳುವಂತೆ, ಹಳೆಯ ನಿಯಮದ ಬಗ್ಗೆ ಗ್ರಾಹಕರಿಂದ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ, ಅವರ ನಿರೀಕ್ಷೆ ಹಾಗೂ ಆದ್ಯತೆಗಳಿಗೆ ಅನುಗುಣವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ.