* ಕಂದಾಯ ಇಲಾಖೆಯಲ್ಲಿ ಪಾರದರ್ಶಕತೆ, ಲಂಚರಹಿತ ಸೇವೆ, ಮತ್ತು ದಲ್ಲಾಳಿಗಳ ಹಾವಳಿ ತಪ್ಪಿಸಲು ಮುಂದಿನ 1 ತಿಂಗಳಲ್ಲಿ ಇ-ಕಚೇರಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.* ಗ್ರಾಮ ಆಡಳಿತಾಧಿಕಾರಿಯಿಂದ ಕಂದಾಯ ಸಚಿವರ ಕಚೇರಿವರೆಗೂ ಇ-ಆಡಳಿತ ರೂಪುಗೊಳ್ಳಲಿದೆ.* 8,357 ವಿಎಗಳ ಪೈಕಿ 7,405 ಮಂದಿಗೆ ಕಚೇರಿ, 4 ಸಾವಿರ ಮಂದಿಗೆ ಲ್ಯಾಪ್ಟಾಪ್, ಉಳಿದವರಿಗೆ ನಾಡ ಕಚೇರಿಯ ಕಂಪ್ಯೂಟರ್ ಬಳಕೆಯ ಅನುಮತಿ ನೀಡಲಾಗಿದೆ.* 6,600 ವಿಎಗಳಿಗೆ ಲಾಗಿನ್ ಐಡಿ ಸೃಜನೆ ಮಾಡಲಾಗಿದೆ. ಇ-ಆಫೀಸ್ನಲ್ಲಿ ದಾಖಲೆಯ ಪರಿಶೀಲನೆ, ಇ-ಸಹಿ ಮೂಲಕ ಮೇಲಾಧಿಕಾರಿಗಳಿಗೆ ರವಾನಿಸುವ ತರಬೇತಿ ನೀಡಲಾಗುತ್ತಿದೆ.* ‘ನನ್ನ ಭೂಮಿ’ ದರಖಾಸ್ತು ಪೋಡಿ ಅಭಿಯಾನಕ್ಕೆ ಗತಿಯುತ ಮಾಡಿದ ಸರ್ಕಾರ, ಈಗಾಗಲೇ 1.09 ಲಕ್ಷ ದಾಖಲೆಗಳನ್ನು ಪೂರ್ಣಗೊಳಿಸಿದ್ದು, ಡಿಸೆಂಬರ್ ಒಳಗೆ 2 ಲಕ್ಷದ ಗುರಿ ಹೊಂದಿದೆ. ಇದು 7 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನ ನೀಡಲಿದೆ.* 52 ಲಕ್ಷ ಆಸ್ತಿಗಳು ಮೃತರ ಹೆಸರಿನಲ್ಲಿ ಇದ್ದು, ಇವುಗಳನ್ನು ಪೌತಿ ಮಾಡಲು ಇ-ಪೌತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 2.3 ಲಕ್ಷ ಆಸ್ತಿಗಳಿಗೆ ಪೌತಿ ಪೂರೈಸಲಾಗಿದೆ. ಪ್ರತಿಯೊಂದು ಖಾತೆ ವರ್ಗಾವಣೆಗೆ ವಿಎಗೆ ₹3 ಪ್ರೋತ್ಸಾಹಧನ ನೀಡಲಾಗುತ್ತದೆ.* 2017ರ ಕಾನೂನು ಆಧಾರದ ಮೇಲೆ ಸಾಂಪ್ರದಾಯಿಕ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ.* ಈವರೆಗೆ 4,250 ವಸತಿ ಪ್ರದೇಶ ಗುರುತಿಸಲಾಗಿದೆ. ಡಿಸೆಂಬರ್ ಒಳಗೆ 1.62 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಗುರಿಯಾಗಿದೆ.