* ಭಾರತ ಈ ಆರ್ಥಿಕ ವರ್ಷದಲ್ಲಿ 100 ಕೋಟಿ ಟನ್ ಕಲ್ಲಿದ್ದಲ್ಲು ಉತ್ಪಾದನೆ ದಾಟಿದ್ದು, ಇದನ್ನು ಪ್ರಧಾನಿ ಮೋದಿ ಹೆಮ್ಮೆಯ ಕ್ಷಣವೆಂದು ವಿವರಿಸಿದ್ದಾರೆ.* ಈ ಹಿಂದೆ ಎಕ್ಸ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಮೋದಿ ಅವರು ಭಾರತ ಶತಕೋಟಿ ಟನ್ ಕಲ್ಲಿದ್ದಲ್ಲು ಉತ್ಪಾದನೆ ಮೈಲಿಗಲ್ಲು ದಾಟಿದ್ದು, ಇದು ಇಂಧನ ಕ್ಷೇತ್ರದ ಬದ್ದತೆಯನ್ನು ತೋರಿಸುತ್ತದೆ ಹಾಗೂ ಸ್ವಾವಲಂಬಿ ಭಾರತದ ಸಂಕೇತವಾಗಿದೆ ಎಂದು ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.* ಚೀನಾ 4.362 ಮೆಟ್ರಿಕ್ ಟನ್ಗಳೊಂದಿಗೆ ಅಗ್ರಗಣ್ಯ ಕಲ್ಲಿದ್ದಲು ಉತ್ಪಾದಕ ದೇಶವಾಗಿದೆ. ಭಾರತ ಎರಡನೇ ಸ್ಥಾನದಲ್ಲಿದ್ದರೆ, ಅಮೆರಿಕ 781 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದಿಸುತ್ತದೆ. ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಟಾಪ್ ಐದರಲ್ಲಿರುವ ಇತರ ಎರಡು ದೇಶಗಳಾಗಿವೆ.* ಭಾರತವು 1,000 ಮೆಟ್ರಿಕ್ ಟನ್ (ಒಂದು ಬಿಲಿಯನ್ ಟನ್) ಕಲ್ಲಿದ್ದಲು ಉತ್ಪಾದನೆಯ ಮೈಲಿಗಲ್ಲು ಮುಟ್ಟಿದೆ ಎಂದು ಸಚಿವ ಜಿ. ಕಿಶನ್ ರೆಡ್ಡಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಜಾಗತಿಕ ವಿದ್ಯುತ್ ಕ್ಷೇತ್ರದಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಸಾಧನೆಗಾಗಿ ಕಲ್ಲಿದ್ದಲು ವಲಯದ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.* ಭಾರತದಲ್ಲಿ ಶೇ. 75ರಷ್ಟು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಪ್ರಮುಖ ಶಕ್ತಿ ಮೂಲವಾಗಿದೆ. ಜಾರ್ಖಂಡ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಒಡಿಶಾ, ಛತ್ತೀಸ್ಗಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲೂ ನಿಕ್ಷೇಪಗಳಿವೆ. ದಕ್ಷಿಣ ಭಾರತದಲ್ಲಿ ಕೇವಲ ತೆಲಂಗಾಣದಲ್ಲೇ ಗಣಿಗಾರಿಕೆ ನಡೆಯುತ್ತದೆ.