* ಕೀನ್ಯಾದ ಪ್ರಸಿದ್ಧ ಕಾದಂಬರಿಕಾರ ಮತ್ತು ನಾಟಕಕಾರ ಗೂಗಿ ವಾ ಥಿಯಾಂಗೊ (87) ಅವರು ನಿಧನರಾದ ಬಗ್ಗೆ ರಾಷ್ಟ್ರಪತಿ ವಿಲಿಯಂ ರುಟೊ ಮಾಹಿತಿ ನೀಡಿದ್ದಾರೆ.* ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಉಚ್ಚ ವರ್ಗದವರನ್ನು ಟೀಕಿಸಿದ್ದಕ್ಕಾಗಿ ಥಿಯಾಂಗೊ ಅವರನ್ನು 1977ರಲ್ಲಿ ಬಂಧಿಸಲಾಗಿತ್ತು. ಒಂದು ವರ್ಷ ದೋಷಾರೋಪವಿಲ್ಲದೆ ಜೈಲಿನಲ್ಲಿ ಇರಿಸಲಾಯಿತು.* ಅವರ ನಾಟಕಗಳು ಕೀನ್ಯಾ ಸರ್ಕಾರದ ಆಕ್ರೋಶಕ್ಕೆ ಕಾರಣವಾಯಿತು. 1982ರಲ್ಲಿ ಅವರನ್ನು ಕೊಲ್ಲಲು ಯೋಜನೆ ಇದ್ದೆಂದು ತಿಳಿದು ದೇಶಭ್ರಷ್ಟರಾದರು. 2004ರಲ್ಲಿ ಮಾಜಿ ಅಧ್ಯಕ್ಷ ಮೊಯಿ ನಿರ್ಗಮಿಸಿದ ನಂತರ, ಅವರು ಕೀನ್ಯಾಕ್ಕೆ ಮರಳಿದರು.* 1980ರಲ್ಲಿ ಇಂಗ್ಲಿಷ್ ಬಿಟ್ಟು, ತಾಯ್ನುಡಿ ಗಿಕುಯು ಭಾಷೆಯಲ್ಲಿ ಬರೆಯಲಾರಂಭಿಸಿದರು. ಥಿಯಾಂಗೊ ತಮ್ಮ ಬರಹಗಳಿಂದ ವಸಾಹತುಶಾಹಿಯ ವಿರುದ್ಧ ಧ್ವನಿ ಎತ್ತಿದ್ದರು.