* ವಿಶ್ವ ಆರೋಗ್ಯ ಸಂಸ್ಥೆ (WHO) ಕೀನ್ಯಾವನ್ನು ಮಾನವ ಆಫ್ರಿಕನ್ ಟ್ರಿಪನೋಸೋಮಿಯಾಸಿಸ್ (ಸ್ಲೀಪಿಂಗ್ ಸಿಕ್ನೆಸ್-ನಿದ್ರಾಹೀನತೆ) ರೋಗವನ್ನು ಸಾರ್ವಜನಿಕ ಆರೋಗ್ಯ ಸವಾಲಾಗಿ ತೊಡೆದುಹಾಕಿದ 10ನೇ ದೇಶವೆಂದು ಘೋಷಿಸಿದೆ. * ನೈರೋಬಿಯಲ್ಲಿ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೀನ್ಯಾ ಸರ್ಕಾರ ಮತ್ತು ಜನರನ್ನು ಅಭಿನಂದಿಸಿದರು.* 2018ರಲ್ಲಿ ಗಿನಿ ವರ್ಮ್ ರೋಗದಿಂದ ಮುಕ್ತಗೊಂಡ ನಂತರ, ಇದು ಕೀನ್ಯಾದಲ್ಲಿ ತೊಡೆದುಹಾಕಲಾದ ಎರಡನೇ ನಿರ್ಲಕ್ಷಿತ ಉಷ್ಣವಲಯದ ರೋಗವಾಗಿದೆ.* ಸ್ಲೀಪಿಂಗ್ ಸಿಕ್ನೆಸ್ ಸೋಂಕಿತ ಟ್ಸೆಟ್ಸೆ ನೊಣಗಳಿಂದ ಹರಡುವ ಪ್ರೊಟೊಜೋವನ್ ಪರಾವಲಂಬಿಗಳಿಂದ ಉಂಟಾಗುತ್ತದೆ.* ಈ ರೋಗದ ಆರಂಭಿಕ ಲಕ್ಷಣಗಳಲ್ಲಿ ಜ್ವರ, ತಲೆನೋವು, ಕೀಲು ನೋವು ಸೇರಿವೆ. ಮುಂದಿನ ಹಂತಗಳಲ್ಲಿ ಗೊಂದಲ, ನಿದ್ರಾ ವ್ಯತ್ಯಯ ಮತ್ತು ನಡವಳಿಕೆಯ ಬದಲಾವಣೆಗಳಂತಹ ನರವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.