* ಖ್ಯಾತ ಕವಯಿತ್ರಿ ಪ್ರಭಾ ವರ್ಮಾ ಅವರ ಮಲಯಾಳಂ ಭಾಷೆಯ ಕಾವ್ಯ ಕೃತಿ ರೌದ್ರ ಸಾತ್ವಿಕಂ ಮತ್ತು 2013 ರಿಂದ 2022 ರ ಅವಧಿಯಲ್ಲಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರ ಹೆಸರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ. * ಈ ಪ್ರಶಸಿಯು ಹದಿನೈದು ಲಕ್ಷ ರೂಪಾಯಿಗಳ ಪ್ರಶಸ್ತಿ ಮೊತ್ತ, ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.* ರೌದ್ರ ಸಾತ್ವಿಕಂ ಎಂಬುದು 2022 ರಲ್ಲಿ ಪ್ರಕಟವಾದ ಪ್ರಭಾ ವರ್ಮಾ ಅವರ ಮಲಯಾಳಂ ಭಾಷೆಯಲ್ಲಿ ಕಾವ್ಯಾತ್ಮಕ ಕೃತಿಯಾಗಿದೆ. ಕಾದಂಬರಿಯು ಅಧಿಕಾರ ಮತ್ತು ರಾಜಕೀಯ, ವ್ಯಕ್ತಿ ಮತ್ತು ರಾಜ್ಯ, ಕಲೆ ಮತ್ತು ಅಧಿಕಾರದ ನಡುವಿನ ಸಂಘರ್ಷವನ್ನು ಕಾವ್ಯಾತ್ಮಕ ರೂಪದಲ್ಲಿ ಅನನ್ಯ ರೀತಿಯಲ್ಲಿ ಪರಿಶೀಲಿಸುತ್ತದೆ.* 1991 ರಲ್ಲಿ ಸ್ಥಾಪನೆಯಾದ ಸರಸ್ವತಿ ಸಮ್ಮಾನ್ ದೇಶದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾಗಿದೆ.* ʻ2013 ಮತ್ತು 2022 ರ ನಡುವೆ ಪ್ರಕಟವಾದ ಪುಸ್ತಕಗಳನ್ನು 22 ಭಾಷಾ ಸಮಿತಿಗಳು ಪರಿಗಣಿಸಿದ್ದು, ಐದು ಪ್ರಾದೇಶಿಕ ಸಮಿತಿಗಳಿಗೆ ತಲಾ ಒಂದು ಪುಸ್ತಕವನ್ನು ಶಿಫಾರಸು ಮಾಡಿದವು. ಅದರಲ್ಲಿ ಐದು ಪುಸ್ತಕಗಳನ್ನು ಪರಿಗಣಿಸಲಾಗಿದೆ. ಅವುಗಳೆಂದರೆ, ಸೈಯದ್ ಮೊಹಮ್ಮದ್ ಅಶ್ರಫ್ ಅವರ ಆಖ್ರಿ ಸವಾರಿಯಾನ್ (ಉರ್ದು ಕಾದಂಬರಿ), ನಾಗೇನ್ ಸೈಕಿಯಾ ಅವರ ಮಿತಾ ಭಾಸ್ ಸಮಗ್ರ (ಅಸ್ಸಾಮಿ ಕಾವ್ಗಂಗಾಧರ್ ಹಂಸ್ದಾ ಅವರ ಪೋಸ್ರಾ (ಸಂತಾಲಿ ಕಾದಂಬರಿ), ಹರೀಶ್ ಮೀನಾಶ್ರು ಅವರ ಬನಾರಸ್ ಡೈರಿ (ಗುಜರಾತಿ ಕವನ), ಮತ್ತು ವರ್ಮ ಅವರ ರೌದ್ರ ಸಾತ್ವಿಕಂ ಎಂದು ಪ್ರತಿಷ್ಟಾನ ತಿಳಿಸಿದೆ.