* ಕರ್ನಾಟಕ ಖೋ ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್ ಅವರನ್ನು ಭಾರತ ಖೋ ಖೋ ಫೆಡರೇಷನ್ನ (ಕೆಕೆಎಫ್ಐ) ಉಪಾಧ್ಯಕ್ಷರಾಗಿ ಮತ್ತೊಮ್ಮೆ ನೇಮಕ ಮಾಡಲಾಗಿದೆ.* ಜುಲೈ 2ರಂದು ನಡೆದ ಆಡಳಿತ ಸಮಿತಿಯ ಸಭೆಯಲ್ಲಿ ಹೊಸ ಪದಾಧಿಕಾರಿಗಳ ಘೋಷಣೆ ನಡೆಯಿತು.* ನವದೆಹಲಿಯ ಬಿಜೆಪಿ ಮುಖಂಡ ಸುಧಾಂಶು ಮಿತ್ತಲ್ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.* ಲೋಕೇಶ್ವರ್ ಅವರು ಮೊದಲ ಬಾರಿಗೆ 2021ರಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು, ಈಗ ಎರಡನೇ ಅವಧಿಗೆ ಮುಂದುವರಿದಿದ್ದಾರೆ.* 2021ರಿಂದ ಕರ್ನಾಟಕ ಖೋ ಖೋ ಸಂಸ್ಥೆಯ ಅಧ್ಯಕ್ಷರಾಗಿರುವ ಅವರು, ಮೂರು ತಿಂಗಳು ಹಿಂದೆ ಮರು ಆಯ್ಕೆಯಾಗಿ ಪದವಿಯಲ್ಲಿ ಮುಂದುವರಿದಿದ್ದಾರೆ.