* ಖನಿಜ ಭದ್ರತಾ ಹಣಕಾಸು ಜಾಲ (ಎಂಎಸ್ ಎಫ್‌ಎನ್) ಇದರ ಸದಸ್ಯ ದೇಶವಾಗಿ ಭಾರತ ಅಧಿಕೃತವಾಗಿ ಸೇರ್ಪಡೆಗೊಂಡಿದೆ.* ಎಂಎಸ್‌ಎಫ್ ಎನ್-ಇದು ಅಮೆರಿಕ ನೇತೃತ್ವದ ಒಂದು ಗುಂಪಾಗಿದೆ. ತಂತ್ರಜ್ಞಾನ ಮತ್ತು ಶುದ್ಧ ಇಂಧನಕ್ಕೆ ಅಗತ್ಯವಾದ ಪ್ರಮುಖ ಖನಿಜಗಳನ್ನು ಪಡೆಯಲು ವಿವಿಧ ದೇಶಗಳು ಒಟ್ಟಾಗಿ ಕೆಲಸ ಮಾಡುವಂತೆ ನೆರವಾಗಲು ಈ ಮಹತ್ವದ ಜಾಲವನ್ನು ಸೃಷ್ಟಿಸಲಾಗಿದೆ.* ವಿಶ್ವ ಸಂಸ್ಥೆ ಮಹಾಧಿವೇಶನದ (ಯುಎನ್ ಜಿ) ವಿದೇಶಾಂಗ ಇಲಾಖೆಯು ಭಾರತದ ಸೇರ್ಪಡೆ ಕುರಿತು ಘೋಷಣೆ ಮಾಡಿತ್ತು. ಜಾಲದಲ್ಲಿ ಇದೀಗ 14 ದೇಶಗಳು ಮತ್ತು ಐರೋಪ್ಯ ಒಕ್ಕೂಟ ಒಳಗೊಂಡಿವೆ.* ಎಂಎಸ್‌ಎಫ್ ಎನ್ ಇದು ಖನಿಜ ಭದ್ರತೆ ಪಾಲುದಾರಿಕೆಗೆ (ಎಂಎಸ್‌ಪಿ) ಸಂಬಂಧಿಸಿದ್ದಾಗಿದೆ. 2022ರಲ್ಲಿ ಅಮೆರಿಕ ಎಂಎಸ್‌ಪಿಯನ್ನು ಆರಂಭಿಸಿತ್ತು. ಭಾರತ 2023ರಲ್ಲಿ ಎಂಎಸ್‌ಪಿಯನ್ನು ಸೇರಿತ್ತು. ಪ್ರಮುಖವಾದ ಖನಿಜಗಳು ಜಾಗತಿಕವಾಗಿ ಲಭ್ಯಗೊಳಿಸುವಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಅದು ತೋರಿಸುತ್ತದೆ.* ಅಪರೂಪದ ಭೂ ಖನಿಜಗಳು (ರೇರ್ ಅರ್ಥ್ ಎಲಿಮೆಂಟ್ಸ್) ಮುಂತಾದ ಪ್ರಮುಖ ಖನಿಜಗಳಿಗಾಗಿ ಕೆಲವು ನಿರ್ದಿಷ್ಟ ದೇಶಗಳು, ವಿಶೇಷವಾಗಿ ಚೀನಾದ ಮೇಲೆ ಅವಂಬಿಸುವುದನ್ನು ತಗ್ಗಿಸುವುದರ ಮೇಲೆ ಎಂಎಸ್ ಎಫ್‌ಎನ್ ಗಮನವನ್ನು ಕೇಂದ್ರೀಕರಿಸುತ್ತದೆ.* ಇಲೆಕ್ಟಿಕ್ ವಾಹನಗಳು ಮತ್ತು ಸೌರ ಫಲಕಗಳಂಥ ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ರೇರ್ ಅರ್ಥ್ ಎಲಿಮೆಂಟ್ಸ್ ಮಹತ್ವದ ಪಾತ್ರ ವಹಿಸುತ್ತದೆ.* ಸದಸ್ಯ ದೇಶಗಳಲ್ಲಿ ಸಹಯೋಗಕ್ಕಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿಎಫ್‌ಐ) ಮತ್ತು ರಫ್ತು ಕ್ರೆಡಿಟ್ ಸಂಸ್ಥೆಗಳಿಗೆ (ಇಸಿಎ) ಎಂಎಸ್‌ಎಫ್‌ಎನ್ ಪ್ರೋತ್ಸಾಹ ನೀಡುತ್ತದೆ.