* ಮೊದಲ ಆವೃತ್ತಿಯ ಮೂರು ದಿನಗಳ ಖೇಲೋ ಇಂಡಿಯಾ ಜಲಕ್ರೀಡೆ ಹಬ್ಬವನ್ನು ಆಗಸ್ಟ್ 21ರಿಂದ 23ರವರೆಗೆ ಶ್ರೀನಗರದ ಪ್ರಸಿದ್ಧ ದಾಲ್ ಲೇಕ್ನಲ್ಲಿ ಆಯೋಜಿಸಲಾಯಿತು. ಇದರ ಮ್ಯಾಸ್ಕಾಟ್ ಹಿಮಾಲಯನ್ ಕಿಂಗ್ಫಿಷರ್.* ಈ ಹಬ್ಬವನ್ನು SAI ಮತ್ತು ಜಮ್ಮು-ಕಾಶ್ಮೀರ ಕ್ರೀಡಾ ಮಂಡಳಿ ಜಂಟಿಯಾಗಿ ಆಯೋಜಿಸಿದ್ದು, ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಪ್ರವಾಸೋದ್ಯಮ ಬೆಂಬಲಿಸುವುದು ಉದ್ದೇಶವಾಗಿದೆ.* ಕಯಾಕಿಂಗ್, ಕನೋಯಿಂಗ್, ರೋಯಿಂಗ್, ವಾಟರ್ ಸ್ಕೀಯಿಂಗ್, ಶಿಕಾರಾ ರೇಸ್ ಮತ್ತು ಡ್ರ್ಯಾಗನ್ ಬೋಟ್ ರೇಸ್ ಸೇರಿ ಐದು ಪ್ರಮುಖ ಕ್ರೀಡೆಗಳು ನಡೆದವು.* 36 ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಂದ ಬಂದ 400ಕ್ಕೂ ಹೆಚ್ಚು ಕ್ರೀಡಾಪಟುಗಳು 24 ಚಿನ್ನದ ಪದಕಗಳಿಗಾಗಿ ಸ್ಪರ್ಧಿಸಿದರು.* ಹಬ್ಬವು ಕ್ರೀಡಾಪಟುಗಳ ಜೊತೆಗೆ ಶಿಕಾರಾ ಮಾಲೀಕರು, ಹೌಸ್ಬೋಟ್ ನಿರ್ವಹಕರು ಹಾಗೂ ಪ್ರವಾಸೋದ್ಯಮ ವಲಯಕ್ಕೂ ಆರ್ಥಿಕ ಲಾಭ ತರುವ ನಿರೀಕ್ಷೆಯಿದೆ. ಒಲಿಂಪಿಯನ್ ಅರ್ಜುನ ಲಾಲ್ ಜಾಟ್ ಪ್ರಮುಖ ಆಕರ್ಷಣೆಯಾಗಿದೆ.* “ಶ್ರೀನಗರದ ಆಭರಣ” ಎನ್ನಲಾಗುವ ದಲ್ ಲೇಕ್ 18 ಚದರ ಕಿ.ಮೀ. ವಿಸ್ತೀರ್ಣವಿದ್ದು ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ಸ್ಥಳೀಯ ಆರ್ಥಿಕತೆಗೆ ಮುಖ್ಯವಾಗಿದೆ.* ಜಮ್ಮು-ಕಾಶ್ಮೀರವು 5ನೇ ವಿಂಟರ್ ಗೇಮ್ಸ್ನ್ನು 2025 ಮಾರ್ಚ್ 9-12 ರಂದು ಗುಲ್ಮಾರ್ಗ್ನಲ್ಲಿ ಆಯೋಜಿಸಲಿದ್ದು, ಮೊದಲ ಹಂತ ಜನವರಿ 2025ರಲ್ಲಿ ಲಡಾಖ್ನಲ್ಲಿ ಜರಗಿತು.* ಈ ಯೋಜನೆ 2018ರಲ್ಲಿ ಪ್ರಾರಂಭವಾಯಿತು. 2019ರಿಂದ ಖೇಲೋ ಇಂಡಿಯಾ ಯೂತ್ ಗೇಮ್ಸ್ ಎಂದು ಕರೆಯಲಾಗುತ್ತಿದ್ದು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯುತ್ತವೆ.* ಪಾಟ್ನಾ, ರಾಜಗಿರ್, ಬೇಗೂಸರಾಯ್, ಗಯಾ ಮತ್ತು ಭಾಗಲ್ಪುರ ಜಿಲ್ಲೆಗಳಲ್ಲಿ ಆಯೋಜಿಸಲಾದ 2025ರ ಆವೃತ್ತಿಯ ಮ್ಯಾಸ್ಕಾಟ್ ಗಜಸಿಂಹ. ಮಹಾರಾಷ್ಟ್ರವು 158 ಪದಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಹರಿಯಾಣ ಮತ್ತು ರಾಜಸ್ಥಾನ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದವು.