* ಭಾರತ ಸರ್ಕಾರ "ಖೇಲೋ ಭಾರತ್" ಎಂಬ ಹೆಸರಿನ ಹೊಸ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಘೋಷಿಸಿದ್ದು, ಮಂಗಳವಾರ(ಜುಲೈ 01) ಕೇಂದ್ರ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ. ಈ ಮೂಲಕ 24 ವರ್ಷಗಳ ನಂತರ ದೇಶಕ್ಕೆ ಹೊಸ ಕ್ರೀಡಾ ನೀತಿ ಸಿಕ್ಕಿದೆ.* ಈ ನೂತನ ನೀತಿಯು 2001ರ ಕ್ರೀಡಾ ನೀತಿಗೆ ಬದಲಿಯಾಗಿ ಜಾರಿಗೆ ಬರುವುದಾಗಿದೆ. ಮೊದಲ ಕ್ರೀಡಾ ನೀತಿಯನ್ನು ಭಾರತ 1984ರಲ್ಲಿ ಘೋಷಿಸಿತ್ತು.* "ಖೇಲೋ ಭಾರತ್" ನೀತಿಯ ಮುಖ್ಯ ಉದ್ದೇಶ, ಭಾರತವನ್ನು 2047ರ ಒಳಗಾಗಿ ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿ ರೂಪಿಸುವುದಾಗಿದೆ.* 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಭಾರತ ಬಿಡ್ಡಿಂಗ್ಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ, ಈ ನೀತಿ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ದಿಕ್ಕು ನೀಡಲಿದೆ. ಸದ್ಯ ಭಾರತ 18ನೇ ಸ್ಥಾನದಲ್ಲಿದೆ.* ನೀತಿಯಲ್ಲಿ ಕ್ರಿಯಾಶೀಲ ಕ್ರೀಡಾ ಪ್ರವಾಸೋದ್ಯಮ, ಬೀಚ್ ಮತ್ತು ಸಾಹಸ ಕ್ರೀಡೆಗಳಿಗೆ ಉತ್ತೇಜನ, ಹೊಸ ಕ್ರೀಡಾ ಲೀಗ್ಗಳು, ಆ್ಯತ್ಲೀಟ್ಗಳಿಗೆ ಹೂಡಿಕೆ ಮುಂತಾದ ಕ್ರಮಗಳನ್ನು ಒಳಗೊಂಡಿದೆ.* ಈ ನೀತಿ ಕೇಂದ್ರ-ರಾಜ್ಯ ಸರ್ಕಾರಗಳು, ನೀತಿ ಆಯೋಗ, ಕ್ರೀಡಾ ಒಕ್ಕೂಟಗಳು, ತಜ್ಞರು ಮತ್ತು ಸಾರ್ವಜನಿಕರ ಸಮಾಲೋಚನೆಯ ಫಲವಾಗಿ ರೂಪಿಸಲ್ಪಟ್ಟಿದೆ.* ಪ್ರಧಾನಿ ನರೇಂದ್ರ ಮೋದಿ ಈ ಕ್ರೀಡಾ ನೀತಿಯನ್ನು ಭಾರತದಲ್ಲಿ ಕ್ರೀಡಾ ಪ್ರತಿಭೆ ಬೆಳವಣಿಗೆಗೆ ಹೆಗ್ಗುರುತು ಎಂದು ಪ್ರಶಂಸಿಸಿದ್ದಾರೆ.