* ಕೆನರಾ ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಶಿಫಾರಸ್ಸು ಹೊರಬಿದ್ದಿದ್ದು, ಜೂನ್ 1ರಿಂದ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಇಡಬೇಕಾದ ನಿಯಮವನ್ನು ಬ್ಯಾಂಕ್ ಕೈಬಿಟ್ಟಿದೆ. ಇದರಿಂದಾಗಿ ಗ್ರಾಹಕರು ಖಾತೆಯಲ್ಲಿ ನಿಗದಿತ ಮೊತ್ತ ಇರಿಸಬೇಕೆಂಬ ದಬ್ಧತೆಗೆ ಒಳಗಾಗಬೇಕಿಲ್ಲ.* ಈ ಹೊಸ ನಿಯಮವು ಉಳಿತಾಯ ಖಾತೆ, ಸಂಬಳ ಖಾತೆ, ಮತ್ತು ಎನ್ಆರ್ಐ ಎಸ್ಬಿ ಖಾತೆಗಳಂತಹ ಎಲ್ಲ ಎಸ್ಬಿ ಖಾತೆಗಳಿಗೆ ಅನ್ವಯವಾಗಲಿದೆ. ಇದುವರೆಗೆ ಪ್ರತಿ ತಿಂಗಳು ಕನಿಷ್ಠ ₹1,000 ರಷ್ಟು ಶೇಷ ಉಳಿಸಬೇಕಾಗಿದ್ದ ಗ್ರಾಹಕರು, ಈಗ ಅದರ ಅಗತ್ಯವಿಲ್ಲದೇ ಸೌಕರ್ಯವನ್ನು ಅನುಭವಿಸಬಹುದು.* ಮಿನಿಮಮ್ ಬ್ಯಾಲೆನ್ಸ್ ಇರಿಸದಿದ್ದರೆ ವಿಧಿಸಲಾಗುತ್ತಿದ್ದ ದಂಡವನ್ನೂ ಬ್ಯಾಂಕ್ ಸಂಪೂರ್ಣವಾಗಿ ರದ್ದುಪಡಿಸಿದೆ. * ಈ ನಿರ್ಧಾರದಿಂದಲೂ ಲಕ್ಷಾಂತರ ಗ್ರಾಹಕರು ಆರ್ಥಿಕವಾಗಿ ಲಾಭ ಪಡೆಯಲಿದ್ದಾರೆ. ಈ ಹೊಸ ನೀತಿ ಮೂಲಕ ಕೆನರಾ ಬ್ಯಾಂಕ್ ತನ್ನ ಗ್ರಾಹಕಪರ ದೃಷ್ಟಿಕೋಣವನ್ನೂ ಮತ್ತೊಮ್ಮೆ ತೋರಿಸಿದೆ.