* ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಗಳು ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ವಿಮಾನ ನಿಲ್ದಾಣದ ಉನ್ನತ ಸೇವೆಗೆ ನೀಡಿ ಗೌರವಿಸಲಾಗಿದೆ.* ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆದ ‘ವಿಮಾನ ನಿಲ್ದಾಣ ಎಫ್ಎಂಡ್ಬಿ ಮತ್ತು ಆತಿಥ್ಯ ಪ್ರಶಸ್ತಿ ಸಮಾರಂಭ-2025’ನಲ್ಲಿ ಈ ಪ್ರಶಸ್ತಿಗಳನ್ನು ಸ್ವೀಕರಿಸಲಾಯಿತು ಎಂದು ಕೆಐಎಎಲ್ ಮುಖ್ಯ ವಾಣಿಜ್ಯ ಅಧಿಕಾರಿ ಕೆನ್ನೆತ್ ಗುಲ್ಡ್ಬ್ಜೆರ್ಗ್ ತಿಳಿಸಿದ್ದಾರೆ.* ಟರ್ಮಿನಲ್ 2 ರಲ್ಲಿರುವ 080 ಲೌಂಜ್ ಒಟ್ಟು ಏಳು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ‘ಅತ್ಯುತ್ತಮ ಲೌಂಜ್’, ‘ಏರ್ಪೋರ್ಟ್ ಎಫ್ಎಂಡ್ಬಿ ಆಫರ್ ಆಫ್ ದಿ ಇಯರ್ - ಸೆನ್ಸ್ ಆಫ್ ಪ್ಲೇಸ್’, ಮತ್ತು ಕಿಲಾ ರೆಸ್ಟೋರೆಂಟ್ಗೆ ‘ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ’ ಪ್ರಶಸ್ತಿಗಳು ಸೇರಿವೆ.* ಇದರಿಂದ ಬೆಂಗಳೂರು ವಿಮಾನ ನಿಲ್ದಾಣದ ಲೌಂಜ್ಗಳು ಮತ್ತು ರೆಸ್ಟೋರೆಂಟ್ಗಳು ಭಾರತೀಯ ಹಾಗೂ ಜಾಗತಿಕ ಮಟ್ಟದಲ್ಲಿ ತಮ್ಮ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.