* ಪ್ರಧಾನಿ ಮಾರ್ಕ್ ಕಾರ್ನಿ ಅವರು ಮೇ 13 ರಂದು (ಮಂಗಳವಾರ) ಘೋಷಿಸಿದ ಪ್ರಮುಖ ಸಚಿವ ಸಂಪುಟ ಪುನರ್ರಚನೆಯಲ್ಲಿ ಅನಿತಾ ಆನಂದ್ ಅವರನ್ನು ಕೆನಡಾದ ಹೊಸ ವಿದೇಶಾಂಗ ಸಚಿವೆಯಾಗಿ ನೇಮಿಸಲಾಗಿದೆ. * ಇತ್ತೀಚೆಗೆ ನಡೆದ ಸಂಸತ್ತಿನ ಚುನಾವಣೆಯಲ್ಲಿ ಅವರ ಲಿಬರಲ್ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಅವರ 28 ಸದಸ್ಯರ ಮಂತ್ರಿ ಮಂಡಳಿಯು ಮೇ 13, 2025 ರಂದು ಪ್ರಮಾಣವಚನ ಸ್ವೀಕರಿಸಿದರು. * ಅನಿತಾ ಆನಂದ್ ಸೇರಿದಂತೆ ಭಾರತೀಯ ಮೂಲದ ನಾಲ್ವರು ಜನರನ್ನು ಮಾರ್ಕ್ ಕಾರ್ನಿ ಅವರ ಸರ್ಕಾರದಲ್ಲಿ ಸೇರಿಸಲಾಗಿದೆ. * ಕೆನಡಾದ ವಿದೇಶಾಂಗ ಸಚಿವೆಯಾಗಿ ನೇಮಕಗೊಂಡ ಮೊದಲ ಹಿಂದೂ ಮಹಿಳೆ ಅನಿತಾ ಆನಂದ್, ಪವಿತ್ರ ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು.* 2019ರಲ್ಲಿರಾಜಕೀಯ ಪ್ರವೇಶಿಸಿದ ಅನಿತಾ ಅವರು, ರಾಷ್ಟ್ರೀಯ ರಕ್ಷಣ ಸಚಿವೆ ಹಾಗೂ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಅನಿತಾ ಅವರು ವಿದೇಶಾಂಗ ಸಚಿವರಾಗಿರುವ ಹಿನ್ನೆಲೆಯಲ್ಲಿ ಖಲಿಸ್ತಾನಿಗಳ ಕುತಂತ್ರದಿಂದಾಗಿ ಹದಗೆಟ್ಟಿರುವ ಭಾರತ ಮತ್ತು ಕೆನಡಾ ನಡುವಿನ ಬಾಂಧ್ಯವ ಸರಿದಾರಿಗೆ ಬರುವ ನಿರೀಕ್ಷೆಯಿದೆ.