* ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಸಂಪುಟದಲ್ಲಿ ಭಾರತ ಮೂಲದ ಇಬ್ಬರೂ ಮಹಿಳೆಯರಾದ ಅನಿತಾ ಆನಂದ್ ಮತ್ತು ಕಮಲಾ ಖೇರಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.* ಕೆನಡಾ ಸಂಸತ್ತಿನ ಇತಿಹಾಸದಲ್ಲಿಯೇ ಖೇರಾ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸತ್ತು ಪ್ರವೇಶಿಸಿದವರಾಗಿದ್ದಾರೆ.* ಅನಿತಾ ಆನಂದ್ ಅವರು ನಾವೀನ್ಯತೆ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿ ಹಾಗೂ ಕಮಲಾ ಖೇರಾ ಅವರು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.* ಅನಿತಾ ಆನಂದ್ ಅವರು ಈ ಹಿಂದೆ ಜಸ್ಟಿನ್ ಟ್ರುಡೊ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ಕೆನಡಾದ ಮೊದಲ ಹಿಂದೂ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.* ಒಂಟಾರಿಯೊದಲ್ಲಿ ಜನಿಸಿದ ಅನಿತಾ(56) , ತಮ್ಮ ಶಿಕ್ಷಣವನ್ನು ಕಾನೂನು ಕ್ಷೇತ್ರದಲ್ಲಿ ಪೂರ್ಣಗೊಳಿಸಿ, ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಪೋಷಕರು ಭಾರತದಿಂದ ಕೆನಡಾಕ್ಕೆ ವಲಸೆ ಬಂದವರಾಗಿದ್ದು, ತಮಿಳುನಾಡು ಮತ್ತು ಪಂಜಾಬ್ನಿಂದ ಮೂಲ ಹೊಂದಿದ್ದಾರೆ.* ಕಮಲಾ ಖೇರಾ (36) ಅವರು ಕೆನಡಾದ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿ ಜನಿಸಿದ ಅವರು, ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಟ್ರುಡೊ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಆರೋಗ್ಯ ಸೇವೆಗಳ ಸಮಾನತೆ ಹಾಗೂ ಸುಧಾರಣೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.* ಕಾರ್ನಿಯವರ ಸಚಿವ ಸಂಪುಟದಲ್ಲಿ 13 ಪುರುಷರು, 11 ಮಹಿಳೆಯರು ಸೇರಿದಂತೆ ಒಟ್ಟು 24 ಮಂದಿ ಇದ್ದಾರೆ. ಟ್ರೂಡೊ ಅವರ 37 ಸದಸ್ಯರ ಸಚಿವ ಸಂಪುಟಕ್ಕೆ ಹೋಲಿಸಿದರೆ ಇದು ಚಿಕ್ಕದಾಗಿದ್ದು, ಅನುಭವ ಮತ್ತು ದಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.