* ಅಮೆರಿಕದ ಈಜುತಾರೆ ಕೇಟಿ ಲೆಡೆಕಿ ಅವರು ವಿಶ್ವ ಈಜು ಚಾಂಪಿಯನ್ಷಿಪ್ನ ಮಹಿಳೆಯರ 1,500 ಮೀಟರ್ ಫ್ರೀಸ್ಟೈಲ್ನಲ್ಲಿ ಚಿನ್ನ ಜಯಿಸಿದರು.* 15:26.44 ಸೆಕೆಂಡ್ನಲ್ಲಿ ದಡ ತಲುಪಿದ ಲೆಡೆಕಿ, ತಮ್ಮ 22ನೇ ವಿಶ್ವ ಚಾಂಪಿಯನ್ ಪದಕವನ್ನು ಪಡೆದು ಮೈಕೆಲ್ ಫೆಲ್ಪ್ಸ್ (26 ಚಿನ್ನ) ಅವರ ದಾಖಲೆ ಹತ್ತಿರವಾದರು.* ಈ ಸ್ಪರ್ಧೆಯಲ್ಲಿ ಇಟಲಿಯ ಸಿಮೋನಾ ಕ್ವಾಡರೆಲ್ಲಾ ಬೆಳ್ಳಿ (15:31.79), ಆಸ್ಟ್ರೇಲಿಯಾದ ಲ್ಯಾನಿ ಪಲ್ಲಿಸ್ಟರ್ ಕಂಚು (15:41.18) ಪಡೆದರು. ಲೆಡೆಕಿ ಈಗಾಗಲೇ 400 ಮೀಟರ್ನಲ್ಲಿ ಕಂಚು ಗೆದ್ದಿದ್ದು, ಮುಂದಿನ 800 ಮೀಟರ್ನಲ್ಲಿ ಸಮ್ಮರ್ ಮೆಕಿಂಟೋಷ್ ಎದುರಿಯಾಗಲಿದ್ದಾರೆ.* ರೊಮೇನಿಯಾದ ಡೇವಿಡ್ ಪೊಪೊವಿಸಿ ಪುರುಷರ 200 ಮೀಟರ್ ಫ್ರೀಸ್ಟೈಲ್ನಲ್ಲಿ 1:43.53 ಸೆಕೆಂಡುಗಳಲ್ಲಿ ಗೆದ್ದು ಚಿನ್ನ ಜಯಿಸಿದರು. ಲ್ಯೂಕ್ ಹಾಬ್ಸನ್ (ಅಮೆರಿಕಾ) ಬೆಳ್ಳಿ, ತತ್ಸುಯಾ ಮುರಾಸಾ (ಜಪಾನ್) ಕಂಚು ಪಡೆದರು.* ಆಸ್ಟ್ರೇಲಿಯಾದ ಕೈಲಿ ಮೆಕ್ಕೌನ್ ಮಹಿಳೆಯರ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ 57.16 ಸೆಕೆಂಡುಗಳಲ್ಲಿ ಚಿನ್ನ ಜಯಿಸಿ ಚಾಂಪಿಯನ್ಷಿಪ್ ದಾಖಲೆ ಬರೆದರು. ರೇಗನ್ ಸ್ಮಿತ್ (ಅಮೆರಿಕಾ) ಬೆಳ್ಳಿ, ಕ್ಯಾಥರಿನ್ ಬರ್ಕಾಫ್ ಕಂಚು ಗಳಿಸಿದರು.* ಜರ್ಮನಿಯ ಅನ್ನಾ ಎಲೆಂಡ್ಟ್ ಮಹಿಳೆಯರ 100 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ ಚಾಂಪಿಯನ್ ಆದರು.* ಪುರುಷರ 100 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ದಕ್ಷಿಣ ಆಫ್ರಿಕಾದ ಪೀಟರ್ ಕೋಟ್ಜೆ ಚಿನ್ನ ಜಯಿಸಿದರು.