* ಕೇರಳದ ವಿಝಿಂಜಂನಲ್ಲಿ ನೆಲೆಗೊಂಡಿರುವ ಎಪಿಇಝಡ್‌ ಆಳ ಸಮುದ್ರದ ಬಂದರನ್ನು ಭಾರತದ ಮೊದಲ ಮೆಗಾ ಟ್ರಾನ್ಸ್‌ಶಿಪ್‌ಮೆಂಟ್‌ ಕಂಟೈನರ್‌ ಟರ್ಮಿನಲ್‌ ಆಗಿ ಅಭಿವೃದ್ಧಿಪಡಿಸಲಾಗಿದೆ. ಇದು ವಿಶ್ವ ದರ್ಜೆ ಭಾರತೀಯ ಉಪ ಖಂಡದಲ್ಲಿನ ಏಕೈಕ ಟ್ರಾನ್ಸ್‌ಶಿಪ್‌ಮೆಂಟ್‌ ಕೇಂದ್ರವಾಗಲಿದೆ. * ಜುಲೈ 11 ರಂದು (ಗುರುವಾರ) ವಿಝಿಂಜಂಗೆ ವಿಶ್ವದ ಎರಡನೇ ಅತಿದೊಡ್ಡ ಹಡಗು ಕಂಪನಿ ಮಾರ್ಸ್ಕ್‌ನ ನೌಕೆಯಾದ 'ಸ್ಯಾನ್ ಫೆರ್ನಾಂಡೋ' 2,000 ಕಂಟೈನರ್‌ಗಳೊಂದಿಗೆ ಬಂದರು ದೇಶಕ್ಕೆ ಮೊದಲ ಬಾರಿಗೆ ಆಗಮಿಸಿದೆ. ಇದರ ಉದ್ಘಾಟನೆ ಜುಲೈ 12 ರಂದು (ಶುಕ್ರವಾರ) ನೆರವೇರಿತು.* ವಿಝಿಂಜಂ ಬಂದರು ದಕ್ಷಿಣ ಭಾರತದ ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯ ದಕ್ಷಿಣಕ್ಕೆ 16 ಕಿಮೀ ದೂರದ ನೆಯ್ಯಾಟ್ಟಿಂಗರ ತಾಲೂಕಿನಲ್ಲಿದೆ. ಬಂದರು ಅಂತಾರಾಷ್ಟ್ರೀಯ ಪೂರ್ವ-ಪಶ್ಚಿಮ ಹಡಗು ಮಾರ್ಗದಿಂದ ಕೇವಲ 10 ಎನ್‌ಎಂ ತಿರುವು ಮತ್ತು ರಾಷ್ಟ್ರೀಯ, ಪ್ರಾದೇಶಿಕ ರಸ್ತೆ ಮತ್ತು ರೈಲು ಸಂಪರ್ಕಕಕ್ಕೆ ಸಮೀಪದಲ್ಲಿದೆ.* 2015 ರಲ್ಲಿ ಡಿಸೆಂಬರ್‌ 5ರಂದು ನೂತನ ಬಂದರಿನ ಕಾಮಗಾರಿ ಆರಂಭಗೊಂಡಿತ್ತು.* ವಿಝಿಂಜಂ ಬಂದರು ಸಂಪೂರ್ಣ ಕೇರಳ ಸರಕಾರದ ಒಡೆತನದಲ್ಲಿರುವ ಕಂಪನಿಯಾಗಿದ್ದು, ಇದರ ಅಭಿವೃದ್ಧಿ ಮತ್ತು ಅನುಷ್ಠಾನ ಕಂಪನಿಯಾಗಿ ಅದಾನಿ ವಿಝಿಂಜಂ ಪ್ರೈವೇಟ್ ಲಿಮಿಟೆಡ್ ಬಂದರನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಕೇರಳ ಸರಕಾರದೊಂದಿಗೆ 40 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. * ಇದು ಸುಮಾರು 7,525 ಕೋಟಿ ರೂ. ಹಣಕಾಸು 'ಯೋಜನೆಯೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಎರಡನೇ ಹಂತದ ಅಭಿವೃದ್ಧಿ ಯೋಜನೆಯನ್ನು ಕೈಗೊಂಡರೆ ಮತ್ತೆ ಹೆಚ್ಚುವರಿ 20 ವರ್ಷಗಳ ತನಕ ಒಪ್ಪಂದ ಮುಂದುವರಿಯಲಿದೆ.