* ಕೇರಳವು ಭಾರತದಲ್ಲಿ ಮೊದಲ ಬಾರಿ ಹಿರಿಯ ನಾಗರಿಕರ ಆಯೋಗವನ್ನು ಸ್ಥಾಪಿಸಿದ ರಾಜ್ಯವಾಗಿದೆ. ಕೇರಳ ರಾಜ್ಯ ಹಿರಿಯ ನಾಗರಿಕರ ಆಯೋಗ ಮಸೂದೆ, 2025ನ್ನು ಅಂಗೀಕರಿಸುವ ಮೂಲಕ ಈ ಕಾನೂನುಬದ್ಧ ಸಂಸ್ಥೆಯನ್ನು ರಚಿಸಲಾಗಿದೆ.* ಈ ಆಯೋಗವು ಹಿರಿಯ ನಾಗರಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ಸುರಕ್ಷಿತಗೊಳಿಸಲು ಹಾಗೂ ನೀತಿ ನಿರ್ಧಾರಗಳಿಗೆ ಸಲಹೆ ನೀಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.* ಈ ಆಯೋಗವು ಹಿರಿಯ ನಾಗರಿಕರ ಹಕ್ಕುಗಳು, ಪುನರ್ವಸತಿ, ರಕ್ಷಣೆ ಹಾಗೂ ಸಮಾಜದಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ. ಇದನ್ನು ಸಮಾನತೆ ಹಾಗೂ ಘನತೆ ಎತ್ತಿಹಿಡಿಯುವ ದೃಷ್ಟಿಯಿಂದ ರೂಪಿಸಲಾಗಿದೆ.
ಮುಖ್ಯ ವೈಶಿಷ್ಟ್ಯಗಳು ಮತ್ತು ಕಾರ್ಯಗಳು:* ನೀತಿ ಸಲಹೆ: ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ನೀತಿಗಳನ್ನು ರೂಪಿಸಲು ಹಾಗೂ ಶಿಫಾರಸು ಮಾಡಲು.* ಪರಿಹಾರ ವ್ಯವಸ್ಥೆ: ನಿರ್ಲಕ್ಷ್ಯ, ದುರುಪಯೋಗ ಹಾಗೂ ಶೋಷಣೆಯ ವಿರುದ್ಧ ದೂರುಗಳನ್ನು ಸ್ವೀಕರಿಸಿ ಪರಿಹರಿಸಲು.* ಕೌಶಲ್ಯ ಬಳಕೆ: ಹಿರಿಯ ನಾಗರಿಕರು ತಮ್ಮ ಜ್ಞಾನ ಮತ್ತು ಅನುಭವವನ್ನು ಸಮಾಜದ ಒಳಿತಿಗಾಗಿ ಬಳಸಲು ಉತ್ತೇಜಿಸಲು.* ಕಾನೂನು ನೆರವು: ಹಕ್ಕುಗಳ ಉಲ್ಲಂಘನೆ, ಆಸ್ತಿ ವಿವಾದ ಹಾಗೂ ಹಿಂಸಾಚಾರದ ಸಂದರ್ಭಗಳಲ್ಲಿ ಕಾನೂನು ನೆರವು ನೀಡಲು.* ಜನಜಾಗೃತಿ ಅಭಿಯಾನ: ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಕುಟುಂಬದ ಕರ್ತವ್ಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಲು.* ನಿಯಮಿತ ವರದಿ: ರಾಜ್ಯ ಸರ್ಕಾರಕ್ಕೆ ನೀತಿ ಸುಧಾರಣೆಗಾಗಿ ಶಿಫಾರಸುಗಳನ್ನು ಸಲ್ಲಿಸಲು.ಈ ಆಯೋಗವು ಹಿರಿಯ ನಾಗರಿಕರ ಭದ್ರತೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪ್ರಮುಖ ಹೆಜ್ಜೆ ಎಂಬುದಾಗಿ ಪರಿಗಣಿಸಲಾಗಿದೆ.