* ನೈರುತ್ಯ ಮುಂಗಾರು ಕೇರಳ ಮತ್ತು ಈಶಾನ್ಯ ಭಾರತವನ್ನು ಏಕಕಾಲಕ್ಕೆ ಮೇ 30 ರಂದು (ಗುರುವಾರ( ಪ್ರವೇಶಿಸಿದೆ. ಪರಸ್ಪರ ದೂರದಲ್ಲಿರುವ ಎರಡು ಪ್ರದೇಶಗಳು ಒಂದೇ ದಿನ ಮುಂಗಾರು ಮಳೆಯ ಮೊದಲ ಸಿಂಚನ ಸಂಭ್ರಮಿಸಿದ ಅಪರೂಪದ ವಿದ್ಯಮಾನಕ್ಕೆ ದೇಶ ಸಾಕ್ಷಿಯಾದಂತಾಗಿದೆ. * ಜೂನ್‌ 1ರಂದು ಕೇರಳ ಪ್ರವೇಶಿಸುವ ಮುಂಗಾರು, ಈಶಾನ್ಯ ಭಾರತವನ್ನು ಜೂನ್‌ 5ರಂದು ತಲುಪುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.* ನೈರುತ್ಯ ಮುಂಗಾರು ಪ್ರವೇಶಿಸಿದ್ದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದ ಬಹುತೇಕ ಭಾಗದತ್ತ ಸಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.* ಬಂಗಾಳ ಕೊಲ್ಲಿಯಲ್ಲಿ ಕಂಡುಬಂದ ಚಂಡಮಾರುತ ವಾತಾವರಣದ ಬದಲಾವಣೆಗೆ  ಕಾರಣವಾಗಿದ್ದು ಕೇರಳದ ಜೊತೆಗೆ ಈಶಾನ್ಯ ಭಾರತದಲ್ಲಿಯೂ ಮಳೆ ಬಂದಿದೆ ತಜ್ಞರು ತಿಳಿಸಿದ್ದಾರೆ.