* ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮುಂದಾಗಿದೆ.* ಭಾರತೀಯ ಆಹಾರ ನಿಗಮ (FCI)ದ ಮೂಲಕ ಕೇಂದ್ರವು, ರಾಜ್ಯ ಸರ್ಕಾರಗಳಿಗೆ, ಸರ್ಕಾರದ ಅಧೀನದ ನಿಗಮಗಳಿಗೆ ಮತ್ತು ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಪ್ರತಿ ಕೆಜಿಗೆ 22 ರೂ.50 ಪೈಸೆಯಂತೆ ಅಕ್ಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ.* ಇ-ಹರಾಜಿನಲ್ಲಿ ಭಾಗಿಯಾಗದೆ ನೇರವಾಗಿ ಎಫ್ಸಿಐನಲ್ಲಿ ಖರೀದಿಸುವ ಅವಕಾಶ ಕೊಡಲಾಗಿದೆ.* ಹಿಂದೆ ಪ್ರತಿ ಕೆಜಿಗೆ 28 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ 2024ರ ಜೂನ್ನಿಂದ 2024ರ ಡಿಸೆಂಬರ್ ವರೆಗೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಗಣನೀಯವಾಗಿ ಅಕ್ಕಿ ಹಾಗೂ ಗೋಧಿ ಉತ್ಪಾದನೆ ಹೆಚ್ಚಳ ಹಾಗೂ ದೇಶಾದ್ಯಂತ 556 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇರುವ ಕಾರಣ ಪ್ರತಿ ಕೆಜಿಗೆ 5 ರೂ.50 ಪೈಸೆ ಇಳಿಸಿ ಹೊಸ ದರದಲ್ಲಿ ಖರೀದಿಸುವ ಅವಕಾಶ ನೀಡಿದೆ.