* ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಜನವರಿ 1, 2024 ರಿಂದ ಅನ್ವಯವಾಗುವಂತೆ DA ಮತ್ತು DR ಪಿಂಚಣಿಯ 46% ರಿಂದ 50% ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. * ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಮೊತ್ತದಲ್ಲಿನ ಹೆಚ್ಚಳದಿಂದ ಸರ್ಕಾರದ ಮೇಲಿನ ಸಂಯೋಜಿತ ಮೊತ್ತದ ಹೊರೆಯು ವಾರ್ಷಿಕ 12,868.72 ಕೋಟಿ ರೂಪಾಯಿಗಳಾಗಿರುತ್ತದೆ. ಇದರಿಂದ ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.* ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುವುದರೊಂದಿಗೆ  ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ.* ಈ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳವು ಕೇಂದ್ರ ಸರ್ಕಾರ  7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ.* ಕೈಗಾರಿಕಾ ಕಾರ್ಮಿಕರ CPI ದತ್ತಾಂಶದ ಆಧಾರದ ಮೇಲೆ ಕೇಂದ್ರ ಸರ್ಕಾರವು ಹೆಚ್ಚಳದ ಪ್ರಮಾಣವನ್ನು ನಿರ್ಧರಿಸುತ್ತದೆ. 12 ತಿಂಗಳ ಸರಾಸರಿ 392.83 ನಲ್ಲಿದೆ. ಇದರ ಆಧಾರದ ಮೇಲೆ ಮೂಲ ವೇತನದ ಶೇ.50.26ರಷ್ಟು ಡಿಎ ಬರಲಿದೆ.* ಈ ಮೊದಲು ತುಟ್ಟಿಭತ್ಯೆ ಪ್ರಮಾಣವು ಶೇ 42ರಷ್ಟಿತ್ತು. ರೈಲ್ವೆ ಸಿಬ್ಬಂದಿಗೆ ಘೋಷಿಸಿರುವ ಬೋನಸ್‌ನಿಂದ 1,968.87 ಕೋಟಿಯಷ್ಟು ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.* ತುಟ್ಟಿಭತ್ಯೆ ಹೆಚ್ಚಳವು ಜುಲೈ 1ರಿಂದ ಅನ್ವಯವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದರು.