* ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (DR) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.* ಪ್ರಸ್ತುತ ಶೇ.55ರಷ್ಟಿರುವ ತುಟ್ಟಿ ಭತ್ಯೆ ಹಾಗೂ ಪರಿಹಾರವನ್ನು ಶೇ.3ರಷ್ಟು ಹೆಚ್ಚಿಸಿ, ಜುಲೈ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ತರಲಾಗಿದೆ.* ಈ ನಿರ್ಧಾರದಿಂದಾಗಿ ವಾರ್ಷಿಕವಾಗಿ ಸರ್ಕಾರದ ಖಜಾನೆಗೆ ರೂ.10083.96 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.* ಸುಮಾರು 49.19 ಲಕ್ಷ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದ್ದಾರೆ.* ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಮಾಡಿದ ಸೂತ್ರದ ಆಧಾರದ ಮೇಲೆ ಜಾರಿಗೊಂಡಿದೆ.