* ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಿಸಲು ಕೇಂದ್ರ ಸಚಿವ ಸಂಪುಟವು 8ನೇ ವೇತನ ಆಯೋಗವನ್ನು ರಚಿಸಲು ಅನುಮೋದನೆ ನೀಡಿದೆ, ಆದರೆ ಇದು ಇನ್ನೂ ಅಧಿಕೃತವಾಗಿ ಅನುಷ್ಠಾನಗೊಂಡಿಲ್ಲ. 8ನೇ ವೇತನ ಆಯೋಗದ ರಚನೆಗೆ ಜನವರಿ 16, 2025 ರಂದು ಒಪ್ಪಿಗೆ ಸಿಕ್ಕಿದೆ, ಆದರೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕ, ಉಲ್ಲೇಖದ ನಿಯಮಗಳು (ToR) ಮತ್ತು ಅಂತಿಮ ಅಧಿಸೂಚನೆ ಇನ್ನೂ ಪ್ರಕಟಿಸಬೇಕಿದೆ.* ಅನುಷ್ಠಾನ: ವೇತನ ಆಯೋಗವು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಮತ್ತು ಸರ್ಕಾರ ಅದನ್ನು ಅಂಗೀಕರಿಸಿದ ನಂತರವೇ ವೇತನ ಹೆಚ್ಚಳ ಜಾರಿಗೆ ಬರಲಿದೆ.* ಕೇಂದ್ರ ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ನೌಕರರ ವೇತನ ಶ್ರೇಣಿಯನ್ನು ನವೀಕರಿಸಲು ವೇತನ ಆಯೋಗವನ್ನು ನೇಮಿಸುತ್ತದೆ.*ಕೇಂದ್ರ ಸರ್ಕಾರವು 49 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮತ್ತು ಸುಮಾರು 65 ಲಕ್ಷ ಪಿಂಚಣಿದಾರರನ್ನು ಹೊಂದಿದೆ. 2016 ರಲ್ಲಿ ಸ್ಥಾಪನೆಯಾದ 7 ನೇ ವೇತನ ಆಯೋಗವು 2026 ರಲ್ಲಿ ತನ್ನ ಅಧಿಕಾರಾವಧಿಯನ್ನು ಮುಕ್ತಾಯಗೊಳಿಸಲಿದೆ.*  8ನೇ ವೇತನ ಆಯೋಗವು ನೌಕರರ ವೇತನ ಹಾಗೂ ಪಿಂಚಣಿಗಳನ್ನು 1.92-2.86 ಅಂಶಗಳಲ್ಲಿ ಏರಿಸಬೇಕೆಂದು ಸಲಹೆ ನೀಡಿದೆ. ಇವುಗಳಲ್ಲಿ ಅಕಸ್ಮಾತ್ 2.0 ಫಿಟ್ ಮೆಂಟ್ ಅಡಿಯಲ್ಲಿ ಏರಿಸಿದರೆ ಮೂಲ ವೇತನ ದುಪ್ಪಟ್ಟಾಗುತ್ತದೆ.* 8ನೇ ವೇತನ ಆಯೋಗದ ಶಿಫಾರಸುಗಳಡಿ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಸಂಬಳ ಮತ್ತು ಪಿಂಚಣಿ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಎನ್ ಸಿ- ಜೆಸಿಎಂನ (ನ್ಯಾಷನಲ್ ಕೌನ್ಸಿಲ್ - ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ) ಸಿಬ್ಬಂದಿ ನಾಯಕ ಎಂ. ರಾಘವಯ್ಯ ಅವರು ಹೊಸ ವೇತನ ಆಯೋಗದಲ್ಲಿ "2.0 ಕ್ಕಿಂತ ಕಡಿಮೆಯಿಲ್ಲದ" ಫಿಟ್‌ಮೆಂಟ್ ಅಂಶವನ್ನು ಒತ್ತಾಯಿಸುತ್ತಿರುವುದಾಗಿ ಎನ್ ಡಿಟಿವಿ ಪ್ರಾಫಿಟ್‌ಗೆ ತಿಳಿಸಿದ್ದಾರೆ.* ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ನ್ಯೂಸ್ 24ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮುಂದಿನ ವೇತನ ಆಯೋಗದ ಅಡಿಯಲ್ಲಿ ಸರ್ಕಾರವು 1.92-2.08 ರ ಫಿಟ್‌ಮೆಂಟ್ ಅಂಶವನ್ನು ಅನುಮೋದಿಸಬಹುದು ಎಂದು ಹೇಳಿದ್ದಾರೆ.* 2.86 ಫಿಟ್‌ಮೆಂಟ್ ಅಂಶದಲ್ಲಿ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 51,480 ಕ್ಕೆ ಏರಿಕೆಯಾಗುತ್ತದೆ. ಇದು ಶೇಕಡ 186 ರಷ್ಟು ಹೆಚ್ಚಳ. ಕನಿಷ್ಠ ಮೂಲ ಪಿಂಚಣಿ 25,740 ರೂ.ಗೆ ಏರಿಕೆಯಾಗಬಹುದು.