* 'ಭಾರತ್‌ ಆರ್ಗ್ಯಾನಿಕ್ಸ್‌' ಎನ್ನುವ ಹೊಸ ಬ್ರ್ಯಾಂಡ್‌ ಅನ್ನು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನವೆಂಬರ್ 08 ರಂದು ಬಿಡುಗಡೆ ಮಾಡಿದ್ದಾರೆ. ಈ ಬ್ರ್ಯಾಂಡ್‌ ಅಡಿಯಲ್ಲಿ ತೊಗರಿ, ಕಡಲೆ, ಸಕ್ಕರೆ, ಹುರುಳಿ, ಬಾಸ್ಮತಿ ಅಕ್ಕಿ ಮತ್ತು ಸೋನಾಮಸೂರಿ ಉತ್ಪನ್ನಗಳನ್ನು ಸಹ ಇದೇ ವೇಳೆ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.* ಪ್ರಸ್ತುತ 6 ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ ವೇಳೆಗೆ ಒಟ್ಟು 20 ಉತ್ಪನ್ನಗಳು ಭಾರತ ಆರ್ಗ್ಯಾನಿಕ್ಸ್ ಬ್ರಾಂಡ್ ನಲ್ಲಿ ಲಭ್ಯವಾಗಲಿವೆ. ಮದ‌ರ್ ಡೈರಿಯ ಸಫಲ್ ಮಳಿಗಗಳು, ಆನ್ ಲೈನ್ ನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ, ದೇಶಾದ್ಯಂತ ರಿಟೇಲ್ ಮಾರಾಟ ಮಳಿಗೆಗಳ ಜಾಲವನ್ನು ಕೂಡ ಆರಂಭಿಸಲಾಗುವುದು.* ನ್ಯಾಷನಲ್ ಕೋ ಆಪರೇಟಿವ್ ಆರ್ಗ್ಯಾನಿಕ್ಸ್ ಲಿಮಿಟೆಡ್(ಎನ್ ಸಿ ಒ ಎಲ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್ ಸಿ ಒ ಎಲ್ ಸಂಸ್ಥೆಯ ಲೋಗೋ, ವೆಬ್ ಸೈಟ್ ಅನ್ನು ಬಿಡುಗಡೆ ಮಾಡಲಾಗಿದೆ. ಆರ್ಗ್ಯಾನಿಕ್ಸ್ ಉತ್ಪನ್ನಗಳ ಮಾರಾಟದಿಂದ ಬರುವ ಲಾಭದಲ್ಲಿ ಶೇಕಡ 50 ರಷ್ಟನ್ನು ಸದಸ್ಯ ರೈತರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ.* 2022 -23ರಲ್ಲಿ ಭಾರತವು 3.12 ಲಕ್ಷ ಟನ್‌ನಷ್ಟು ಆರ್ಗ್ಯಾನಿಕ್ ಉತ್ಪನ್ನಗಳನ್ನು ರಫ್ತು ಮಾಡಿದ್ದು ಮೌಲ್ಯದ ಲೆಕ್ಕದಲ್ಲಿ 75,525 ಕೋಟಿ ಆಗಿದೆ. ಅಮೆರಿಕ, ಐರೋಪ್ಯ ಒಕ್ಕೂಟ, ಕೆನರಾ ಮತ್ತು ಇತರೆ ದೇಶಗಳಿಗೆ ಆರ್ಗ್ಯಾನಿಕ್ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.* ಭಾರತದಲ್ಲಿ  7.89 ಕೋಟಿ ಸಹಕಾರ ಸಂಘಗಳಲಿದ್ದು, 29 ಕೋಟಿ ಸಹಕಾರ ಸಂಘಗಳಲ್ಲಿನ ಸದಸ್ಯರಿದ್ದಾರೆ.ಆರ್ಗ್ಯಾನಿಕ್ ಕೃಷಿ 27 ಲಕ್ಷ ಹಕ್ಟೇರ್ ಭಾರತದಲ್ಲಿ ಆರ್ಗ್ಯಾನಿಕ್ ಪ್ರಮಾಣಪತ್ರ ಪಡೆದಿರುವ ಕೃಷಿ ಭೂಮಿ ಇದೆ. 29 ಲಕ್ಷ ಟನ್ ಪ್ರಮಾಣೀಕೃತ ಆರ್ಗ್ಯಾನಿಕ್ ಉತ್ಪನ್ನಗಳು 2022-2023 ರಲ್ಲಿ ಉತ್ಪಾದನೆಯಾಗಿದೆ.