* ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಲ ಬರೋಬ್ಬರಿ 130 ಲಕ್ಷ ಕೋಟಿ ರೂ. ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.* 2015-16ರಲ್ಲಿ ಸಾಲ 70.98 ಲಕ್ಷ ಕೋಟಿ ಇದ್ದು, 2025-26ರಲ್ಲಿ ಇದು 200.16 ಲಕ್ಷ ಕೋಟಿಗೆ ಏರಲಿದೆ. ಈ ವರ್ಷ ಸರ್ಕಾರ 4.61 ಲಕ್ಷ ಕೋಟಿ ರೂ. ಮರುಪಾವತಿ ಮಾಡಿದ್ದು, 12.76 ಲಕ್ಷ ಕೋಟಿ ರೂ. ಬಡ್ಡಿ ಪಾವತಿಸಿದೆ.* ಕೇಂದ್ರ ಜಿಎಸ್ಟಿ ಅಧಿಕಾರಿಗಳ ಪ್ರಕಾರ, 2024-25ರಲ್ಲಿ ಕರ್ನಾಟಕದಲ್ಲಿ ಜಿಎಸ್ಟಿ ವಂಚನೆ 5 ಪಟ್ಟು ಹೆಚ್ಚಾಗಿದೆ. ಮೂರು ವರ್ಷಗಳಲ್ಲಿ ಒಟ್ಟು 39,577 ಕೋಟಿ ರೂ. ವಂಚನೆ ಪತ್ತೆಯಾಗಿದೆ.* 2025ನೇ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ 1,254 ಪ್ರಕರಣಗಳಲ್ಲಿ 9 ಜನರನ್ನು ಬಂಧಿಸಿ, 1,623 ಕೋಟಿ ರೂ. ಸ್ವಯಂಪ್ರೇರಿತವಾಗಿ ಸಂಗ್ರಹಿಸಲಾಗಿದೆ.* ದೇಶದ ಜಿಎಸ್ಟಿ ಸಂಗ್ರಹಣೆ ನಿರಂತರವಾಗಿ ಏರಿಕೆಯಾಗುತ್ತಿದ್ದು, 2024-25ರಲ್ಲಿ 22.08 ಲಕ್ಷ ಕೋಟಿ ರೂ. ದಾಖಲಾಗಿದೆ.* ಜಿಎಸ್ಟಿ ಜಾರಿಗೆ ಬಂದ 8 ವರ್ಷಗಳಲ್ಲಿ ನೋಂದಾಯಿತ ಪಾವತಿದಾರರ ಸಂಖ್ಯೆ 65 ಲಕ್ಷದಿಂದ 1.51 ಕೋಟಿಗೆ ಏರಿದೆ. ಈ ವರ್ಷ ಕಳೆದ ವರ್ಷಕ್ಕಿಂತ 9.4% ಹೆಚ್ಚು ಸಂಗ್ರಹವಾಗಿದೆ.