* ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಜೂನ್ 10 ರಂದು (ಸೋಮವಾರ) ಖಾತೆ ಹಂಚಿಕೆ ಮಾಡಲಾಗಿದೆ.* ಖಾತೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಮೋದಿ ಅವರು ಕಳೆದ ಸರ್ಕಾರದಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ನಾಲ್ವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. * ಅಮಿತ್ ಶಾ (ಗೃಹ ಸಚಿವ), ರಾಜನಾಥ್ ಸಿಂಗ್ (ರಕ್ಷಣೆ ಸಚಿವ), ನಿರ್ಮಲಾ ಸೀತಾರಾಮನ್ (ಹಣಕಾಸು, ಕಾರ್ಪೊರೇಟ್ ವ್ಯವಹಾರ), ಎಸ್. ಜೈಶಂಕರ್ (ವಿದೇಶಾಂಗ ಸಚಿವ) ಅದೇ ಖಾತೆಗಳಲ್ಲಿ ಮುಂದುವರಿಯಲಿದ್ದಾರೆ. * ನಿತಿನ್ ಗಡ್ಕರಿ (ರಸ್ತೆ ಸಾರಿಗೆ ಹಾಗೂ ಹೆದ್ದಾರಿ), ಪೀಯೂಷ್ ಗೋಯಲ್ (ವಾಣಿಜ್ಯ), ಧರ್ಮೇಂದ್ರ ಪ್ರಧಾನ್ (ಶಿಕ್ಷಣ), ಭೂಪೇಂದ್ರ ಯಾದವ್ (ಪರಿಸರ) ಅವರಿಗೆ ಹಿಂದಿನ ಖಾತೆಗಳನ್ನೇ ನೀಡಲಾಗಿದೆ. * ಬಿಜೆಪಿ ರಾಜ್ಯಾಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಅರೋಗ್ಯ ಖಾತೆ ಸಚಿವ, ಅನ್ನಪೂರ್ಣ ದೇವಿ ಮಹ್ಲಾ ಮತ್ತು ಮಕ್ಕಳ ಕಲ್ಯಾಣ, ಡಾ. ಜಿತೇಂದ್ರ  ಸಿಂಗ್ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸ್ಥಾನವನ್ನು ನೀಡಲಾಗಿದೆ.* ವಿ.ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆಗಳನ್ನು ನೀಡಲಾಗಿದೆ. 'ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ₹5,300 ಕೋಟಿ ಅನುದಾನ ಪ್ರಕಟಿಸಿದೆ. ಈ ಯೋಜನೆಯಡಿ ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕಕ್ಕೆ ನೀರು ಉಣಿಸಲು ಉದ್ದೇಶಿಸಲಾಗಿದೆ.* ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ, ಮನೋಹರ್ ಲಾಲ್ ಖಟ್ಟ‌ರ್ ಅವರಿಗೆ ವಸತಿ ಹಾಗೂ ನಗರ ವ್ಯವಹಾರಗಳು, ವಿದ್ಯುತ್ ಖಾತೆ ಕೊಡಲಾಗಿದೆ.* ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವಾದ ಜೂನ್ 10. 2024 ರಂದು (ಸೋಮವಾರ) ನರೇಂದ್ರ ಮೋದಿ ಅವರು 'ಕಿಸಾನ್ ನಿಧಿ'ಯ ಹಣ ಬಿಡುಗಡೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದರು.* 'ಕಿಸಾನ್ ನಿಧಿ'ಯ 17ನೇ ಕಂತಿನ ಸುಮಾರು ₹20 ಸಾವಿರ ಕೋಟಿ ಬಿಡುಗಡೆಗೆ ಪ್ರಧಾನಿ ಸಮ್ಮತಿ ನೀಡಿದ್ದು, ಇದರಿಂದ ದೇಶದ ಸುಮಾರು 9.3 ಕೋಟಿ ರೈತರಿಗೆ ನೆರವಾಗಲಿದೆ.