* ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಶ್ರೀವಾಸ್ತವ ಅವರು ಗುರುವಾರ(ಮೇ 01) ಕೇಂದ್ರ ಸರ್ಕಾರದ ಕಂದಾಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನೇಮಕಾತಿಗೆ ಏಪ್ರಿಲ್ 18ರಂದು ಕ್ಯಾಬಿನೆಟ್ ನೇಮಕಾತಿ ಸಮಿತಿಯಿಂದ ಅನುಮೋದನೆ ಲಭಿಸಿತ್ತು.* 1994ರ ಬ್ಯಾಚ್ನ ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ ಅವರು, ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.* ಶ್ರೀವಾಸ್ತವ ಅವರು ತಮ್ಮ ಹೊಸ ಹುದ್ದೆಯಲ್ಲಿ ತೆರಿಗೆ ನಿರ್ವಹಣೆ, ಆದಾಯ ಸಂಗ್ರಹ ಗುರಿಗಳ ಹಾಗೂ ತನಿಖಾ ಸಂಸ್ಥೆಗಳ ಮೇಲ್ವಿಚಾರಣೆ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಅವರು ಜಿಎಸ್ಟಿ ಮಂಡಳಿಗೆ ಪ್ರಸ್ತಾವನೆ ರೂಪಿಸುವ ಜೊತೆಗೆ ಕೇಂದ್ರ-ರಾಜ್ಯ ಸಮನ್ವಯ ಕಾರ್ಯವನ್ನೂ ನಿರ್ವಹಿಸಲಿದ್ದಾರೆ.* ಅವರ ಅನುಭವದಲ್ಲಿ ಪ್ರಧಾನಮಂತ್ರಿ ಕಚೇರಿ, ಹಣಕಾಸು ಸಚಿವಾಲಯ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಕರ್ನಾಟಕದ ನಗರ ಮೂಲಸೌಕರ್ಯ ನಿಗಮದ ಸೇವೆಗಳು ಸೇರಿವೆ. ಈ ಹಿಂದೆ ಈ ಜವಾಬ್ದಾರಿಯನ್ನು ಹಣಕಾಸು ಕಾರ್ಯದರ್ಶಿ ಅಜಯ್ ಸೇಠ್ ನಿರ್ವಹಿಸುತ್ತಿದ್ದರು.* 2025-26ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2026-27ರಿಂದ ಆರಂಭವಾಗುವ ಪಂಚವಾರ್ಷಿಕ ಯೋಜನೆಯಡಿ ಸರಕಾರದ ಸಾಲವನ್ನು GDPಯ 50% ಕ್ಕೆ ಇಳಿಸುವ ಗುರಿಯನ್ನು ಘೋಷಿಸಿದ್ದಾರೆ.