* ನ್ಯೂಟನ್ ಚಲನಚಿತ್ರದ ನಟ ರಾಜ್ಕುಮಾರ್ ರಾವ್ (Rajkumar Rao) ಅವರನ್ನು ಕೇಂದ್ರ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಗಿ ಚುನಾವಣಾ ಆಯೋಗ ನೇಮಕ ಮಾಡಿದೆ.* ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ ಕುಮಾರ್ ರಾವ್ ಅವರ ನೇಮಕವನ್ನು ಅಧಿಕೃತವಾಗಿ ಇಂದು ಘೋಷಣೆ ಮಾಡಲಿದ್ದಾರೆ.* ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರತದಾದ್ಯಂತ ಐದು ರಾಜ್ಯಗಳಲ್ಲಿ 161 ಮಿಲಿಯನ್ ಜನರು ಮತ ಚಲಾಯಿಸಲಿದ್ದಾರೆ ಎಂದು ಭಾರತದ ಚುನಾವಣಾ ಆಯೋಗವು ಘೋಷಿಸಿದೆ. * ನವೆಂಬರ್ 7 ರಂದು ಮಿಜೋರಾಂ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 90 ಸದಸ್ಯ ಬಲದ ವಿಧಾನಸಭೆ ಹೊಂದಿರುವ ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ನವೆಂಬರ್ 17 ಮತ್ತು 30 ರಂದು ಚುನಾವಣೆ ನಡೆಯಲಿದೆ. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. * ನ್ಯೂಟನ್ ಚಿತ್ರದಲ್ಲಿ ನಕ್ಸಲ್ ಪೀಡಿತ ಛತ್ತೀಸಗಡದಲ್ಲಿ ಚುನಾವಣೆ ನಡೆಸುವ ಪ್ರಮುಖ ವ್ಯಕ್ತಿ ಪಾತ್ರದಲ್ಲಿ ರಾವ್ ಅಭಿನಯಿಸಿದ್ದು ಈ ಪಾತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.