* ಭಾರತೀಯ ನೌಕಾಪಡೆಯು ಇತ್ತೀಚೆಗೆ ತನ್ನ ನೌಕಾಪಡೆಗೆ ಸೇರಿಸಲಾದ ಪರಮಾಣು ಸಬ್ಮೆರಿನ್ ಐಎನ್ಎಸ್ ಅರಿಘಾತ್ ನಿಂದ 3,500 ಕಿಮೀ ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. K-4 ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ಭಾರತದ ಎರಡನೇ ಸ್ಟ್ರೈಕ್ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ.* ಭಾರತೀಯ ನೌಕಾಪಡೆಯು ತನ್ನ ಶಸ್ತ್ರಾಗಾರದಲ್ಲಿ ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. INS ಅರಿಹಂತ್ ಮತ್ತು ಅರಿಘಾತ್, ಇದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. * ಆಗಸ್ಟ್ನಲ್ಲಿ ವಿಶಾಖಪಟ್ಟಣದಲ್ಲಿರುವ ಹಡಗು ನಿರ್ಮಾಣ ಕೇಂದ್ರದಲ್ಲಿ ಅರಿಘಾತ್ ಅನ್ನು ಸೇರಿಸಲಾಗಿತ್ತು. ಇನ್ನು ಮೂರನೇ ಜಲಾಂತರ್ಗಾಮಿ ನೌಕೆಯ ನಿರ್ಮಾಣ ಆರಂಭವಾಗಿದ್ದು ಮುಂದಿನ ವರ್ಷ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.* ಈ ಜಲಾಂತರ್ಗಾಮಿ ನೌಕೆಗಳ ಮೂಲಕ ಶತ್ರು ರಾಷ್ಟ್ರಗಳ ಮೇಲೆ ಪರಮಾಣು ಕ್ಷಿಪಣಿಗಳನ್ನು ಹಾರಿಸಬಹುದು. 2009ರಲ್ಲಿ ಮೊದಲ ಬಾರಿಗೆ ಐಎನ್ಎಸ್ ಅರಿಹಂತ್ ಅನ್ನು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಪ್ರದರ್ಶಿಸಲಾಗಿದ್ದು ನಂತರ 2016ರಲ್ಲಿ ನೌಕಾಪಡೆಗೆ ಸೇರಿಸಲಾಯಿತು. ಭಾರತೀಯ ನೌಕಾಪಡೆಯು ಮುಂದಿನ 5 ವರ್ಷಗಳಲ್ಲಿ ಇನ್ನೂ ಎರಡು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಿದೆ.