Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತದ ಸೆಮಿಕಂಡಕ್ಟರ್ ಕ್ರಾಂತಿ: ಸಾನಂದ್ನಲ್ಲಿ ಕೇನ್ ಸೆಮಿಕಂಡಕ್ಟರ್ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ!
Authored by:
Akshata Halli
Date:
1 ಎಪ್ರಿಲ್ 2026
➤
ಅಹಮದಾಬಾದ್:
ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಭಾರತವನ್ನು ಬಲಿಷ್ಠ ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಗುಜರಾತ್ನ ಸಾನಂದ್ನಲ್ಲಿ
3,300 ಕೋಟಿ ರೂಪಾಯಿ
ವೆಚ್ಚದ
ಕೇನ್ ಸೆಮಿಕಂಡಕ್ಟರ್ (Kaynes Semicon)
ಪ್ಲಾಂಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (31-03-20260) ಉದ್ಘಾಟಿಸಿದರು.
➤
ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, "ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ವರ್ಷಗಳೇ ಬೇಕಾಗುತ್ತವೆ. ಆದರೆ ಭಾರತವು ಕೇವಲ
900 ದಿನಗಳಲ್ಲಿ
ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಿ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ," ಎಂದು ಶ್ಲಾಘಿಸಿದರು. ಮೈಕ್ರಾನ್ (Micron) ಕಂಪನಿಯ ನಂತರ ಈ ಭಾಗದಲ್ಲಿ ಕಾರ್ಯಾರಂಭ ಮಾಡುತ್ತಿರುವ ಎರಡನೇ ಅತಿದೊಡ್ಡ ಘಟಕ ಇದಾಗಿದೆ.
➤
ದಿನಕ್ಕೆ 60 ಲಕ್ಷ ಚಿಪ್ ಉತ್ಪಾದನೆ:
ಇದು ಕೇವಲ ಕಾರ್ಖಾನೆಯಲ್ಲ, ಇದೊಂದು
OSAT (Outsourced Semiconductor Assembly and Test)
ಘಟಕವಾಗಿದೆ. ಇಲ್ಲಿ ಸೆಮಿಕಂಡಕ್ಟರ್ ಚಿಪ್ಗಳ ಅಸೆಂಬ್ಲಿಂಗ್, ಪ್ಯಾಕೇಜಿಂಗ್ ಮತ್ತು ಕಟ್ಟುನಿಟ್ಟಾದ ಪರೀಕ್ಷೆಗಳು ನಡೆಯುತ್ತವೆ. ಸ್ಮಾರ್ಟ್ಫೋನ್, ಎಲೆಕ್ಟ್ರಿಕ್ ವಾಹನ (EV) ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಗೆ ಈ ಘಟಕ ದೊಡ್ಡ ಬಲ ನೀಡಲಿದೆ.
➤
ಕೇನ್ ಸೆಮಿಕಂಡಕ್ಟರ್ ಘಟಕದ ಆರಂಭದಿಂದ ಭಾರತವು ಕೇವಲ ಚಿಪ್ಗಳನ್ನು ಆಮದು ಮಾಡಿಕೊಳ್ಳುವ ದೇಶವಾಗಿ ಉಳಿಯದೆ, ಜಾಗತಿಕವಾಗಿ ಚಿಪ್ಗಳನ್ನು ಪೂರೈಸುವ 'ಹಬ್' ಆಗಿ ಮಾರ್ಪಡುತ್ತಿದೆ. ಇದು ಯುವಜನತೆಗೆ ಉದ್ಯೋಗದ ಜೊತೆಗೆ ತಾಂತ್ರಿಕ ಕ್ರಾಂತಿಗೂ ಮುನ್ನುಡಿ ಬರೆದಿದೆ.
Take Quiz
Loading...