* ಕೌಶಲ ಭಾರತ ಕಾರ್ಯಕ್ರಮವನ್ನು 2026ರವರೆಗೆ ಮುಂದುವರಿಸಲು ಕೇಂದ್ರ ಸರಕಾರವು ಯೋಜಿಸಿದೆ. ಇದಕ್ಕಾಗಿ 8,800 ಕೋಟಿ ರೂ.ಗಳನ್ನು ದಾಟಲಿದೆ.* ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ದೇಶದಾದ್ಯಂತ ಬೇಡಿಕೆಯಲ್ಲಿರುವ ಉದ್ಯೋಗಗಳಿಗೆ ಪರಿಣತರನ್ನು ಸಜ್ಜುಗೊಳಿಸಲು ಈ ಉಪಕ್ರಮ ನೆರವಾಗಲಿದೆ ಎಂದು ಹೇಳಿದ್ದಾರೆ.* ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ಷಿಪ್ ಪ್ರಚಾರ ಯೋಜನೆ ಮತ್ತು ಜನ ಶಿಕ್ಷಣ ಸಂಸ್ಥೆ ಯೋಜನೆಗಳನ್ನು ಕೌಶಲ್ಯ ಭಾರತ ಯೋಜನೆಯಡಿ ಸಮೂಹೀಕರಿಸಲಾಗಿದೆ.* ಈ ಯೋಜನೆಗಳು ಸೃಜನಾತ್ಮಕ ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಆಧರಿತ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ತಳಸಮುದಾಯದ ಯುವಕರಿಗೆ ವೃತ್ತಿಪರ ಶಿಕ್ಷಣ ಹಾಗೂ ತರಬೇತಿ ಪಡೆಯಲು ಅವಕಾಶ ಒದಗಿಸುತ್ತವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 4.0* ಈ ಉಪಕ್ರಮವು 15ರಿಂದ 59 ವರ್ಷದೊಳಗಿನವರಿಗೆ ಅಲ್ಪಾವಧಿ ತರಬೇತಿ ಮತ್ತು ಮರುಕೌಶಲ ಕಲಿಕೆ ಮೂಲಕ ವೃತ್ತಿಜೀವನ ಅಭಿವೃದ್ಧಿ ಉದ್ದೇಶಿಸುತ್ತದೆ.* ಅಲ್ಪಾವಧಿ ಕೌಶಲ್ಯ ಕೋರ್ಸ್ಗಳಲ್ಲಿ 'ಆನ್ ದಿ ಜಾಬ್ ಟ್ರೆನಿಂಗ್' ಅನ್ನು ಒಳಪಡಿಸಿ, ಉದ್ಯೋಗಿಗಳಿಗಾಗಿ ಪೂರಕ ವಾತಾವರಣ ನಿರ್ಮಿಸಬೇಕು. ಆದಕ್ಕಾಗಿ ಎಐ, 5ಜಿ ಟೆಕ್ನಾಲಜಿ, ಸೈಬರ್ ಸೆಕ್ಯೂರಿಟಿ, ಗ್ರೀನ್ ಹೈಡೋಜನ್ ಹಾಗೂ ಡ್ರನ್ ಟೆಕ್ನಾಲಜಿ ಸೇರಿ 400ಕ್ಕೂ ಅಧಿಕ ಕೋರ್ಸ್ಗಳನ್ನು ಆರಂಭಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.