➤ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಶಿಲ್ಪಕಲಾ ಕೃತಿಗಳ ಬಹುಮಾನ ಪ್ರಕಟಿಸಿದೆ. 
➤ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ (ಸಂಪ್ರದಾಯ, ಸಮಕಾಲೀನ, ರಥ ಶಿಲ್ಪ ಇತ್ಯಾದಿ) ಸಾಧನೆ ಮಾಡಿದ ಕಲಾವಿದರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
=> ವಾರ್ಷಿಕ ಗೌರವ ಪ್ರಶಸ್ತಿ: ₹50,000 ನಗದು ಮತ್ತು ಪ್ರಶಸ್ತಿ ಫಲಕ.
=> ಶಿಲ್ಪಶ್ರೀ ಹಾಗೂ ದತ್ತಿ ಪ್ರಶಸ್ತಿಗಳು: ₹25,000 ನಗದು ಮತ್ತು ಪ್ರಶಸ್ತಿ ಫಲಕ.
=> ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.
➤ 2024  ಸಾಲಿನ ‘ಗೌರವ ಪ್ರಶಸ್ತಿ’ ವಿಜೇತರು:
1. ಎ.ಪಿ. ಶ್ರೀಕಂಠಾಚಾರ್ಯ - ದಾವಣಗೆರೆ - ಸಂಪ್ರದಾಯ ಶಿಲ್ಪ
2. ಸಾಯಿನಾಥ ಭೀಮರಾಯಪ್ಪ - ಧಾರವಾಡ - ಸಂಪ್ರದಾಯ ಶಿಲ್ಪ
3. ಸೋಮಾಚಾರಿ - ಹಾವೇರಿ - ಸಂಪ್ರದಾಯ ಶಿಲ್ಪ
4. ರಾಜಬಾಬು - ಮೈಸೂರು - ಸಿಮೆಂಟ್ ಶಿಲ್ಪ
5.
ಎಂ.ಕೆ. ಗಿರೀಶ್‌ಕುಮಾರ್ - ವಿಜಯನಗರ - ಸಮಕಾಲೀನ ಶಿಲ್ಪ
➤ 2025ನೇ 'ಗೌರವ ಪ್ರಶಸ್ತಿ’ ವಿಜೇತರು:
1. ಕಲ್ಲಣ್ಣ ಸಾಯಬಣ್ಣ ಕಂಬಾರ - ಕಲಬುರಗಿ - ಸಂಪ್ರದಾಯ ಶಿಲ್ಪ
2. ಅರವಿಂದ ವಿ. ಬಡಿಗೇರ - ರಾಯಚೂರು - ರಥ ಶಿಲ್ಪ
3. ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ - ಗದಗ - ಸಂಪ್ರದಾಯ ಶಿಲ್ಪ
4. ಅರುಣ ಬುಕ್ಕಾ ಗುಡಿಗಾರ - ಉತ್ತರ ಕನ್ನಡ - ಸಂಪ್ರದಾಯ ಶಿಲ್ಪ
5. ಕೆ. ರಾಘವೇಂದ್ರ - ಮೈಸೂರು - ಸಮಕಾಲೀನ ಶಿಲ್ಪ
➤ 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿ ವಿಜೇತರು (10 ಸಾಧಕರು)
1. ಬಸ್ತಿ ಸದಾಶಿವ ಶೆಣೈ - ದಕ್ಷಿಣ ಕನ್ನಡ
2. ದೇವಿಪ್ರಸಾದ್ ಎಂ. ಮಾಯಾಚಾರ್ಯ - ಬಾಗಲಕೋಟೆ
3. ಮಂಜುನಾಥ ಡಿ. ಬಾರ್ಕಿ - ಹಾವೇರಿ
4. ರಾಜೇಶ್ ಎಂ. ಪತ್ತಾರ - ಗದಗ
5. ಆನಂದ ಹಾವನೂರು - ಬೆಳಗಾವಿ
6. ನವೀನ್ ಕಡ್ಲಾಸ್ಕರ್ - ಧಾರವಾಡ
7. ಕೆ.ಎನ್. ಕೃಷ್ಣಮೂರ್ತಿಚಾರ್ - ಚಿತ್ರದುರ್ಗ
8. ವಿಪಿನ್ ಭದೌರಿಯಾ - ಬೆಂಗಳೂರು
9. ಸಿ.ಪಿ. ವಿಶ್ವನಾಥ್ - ತುಮಕೂರು
10. ಎಂ. ಶರಣ್ - ಬೆಂಗಳೂರು ದಕ್ಷಿಣ
➤ ವಿಶೇಷ ದತ್ತಿ ಪ್ರಶಸ್ತಿಗಳು ಮತ್ತು ಕಲಾಕೃತಿಗಳು: ಅಕಾಡೆಮಿಯು ಶಿಲ್ಪಕಲಾ ಪ್ರದರ್ಶನಕ್ಕಾಗಿ ಅತ್ಯುತ್ತಮ ಕಲಾಕೃತಿಗಳನ್ನು ಸಹ ಆಯ್ಕೆ ಮಾಡಿದೆ:
- ರಾಮ್ಸನ್ಸ್ ಕಲಾ ಪ್ರತಿಷ್ಠಾನ ದತ್ತಿ ಪ್ರಶಸ್ತಿ: ಈರಣ್ಣ, ರಾಯಚೂರು (ಕೃತಿ: ಸಗರನಾಡಿನ ಜಾನಪದ ಗ್ರಾಮದೇವತೆ).
- ಮನೋಹರ ಕಾಳಪ್ಪ ಪತ್ತಾರ ದತ್ತಿ ಪ್ರಶಸ್ತಿ: ಎಂ. ಬಡಿಗೇರ, ಕಲಬುರಗಿ (ಕೃತಿ: ವೃಷಭವಾಹನ ಶಿವ).
- ತಲ್ಲೂರು ಫ್ಯಾಮಿಲಿ ಟ್ರಸ್ಟ್ ದತ್ತಿ ಪ್ರಶಸ್ತಿ: ರೂಪ ಖಂಗೋವಿ, ಬೆಂಗಳೂರು ಮತ್ತು ಪಿ.ಎಸ್. ಕೃಷ್ಣಮೂರ್ತಿ.
- ಅರೇನಾ ಅನಿಮೇಷನ್ ದತ್ತಿ ಪ್ರಶಸ್ತಿ: ಆನಂದ ಬಿಳಗಿ, ಬಾಗಲಕೋಟೆ (ಕೃತಿ: ಅಭಿನವ ಶ್ರೀ - 3D ಪ್ರಿಂಟ್).
➤ ಅಕಾಡೆಮಿ ಬಹುಮಾನಕ್ಕೆ ಆಯ್ಕೆಯಾದ ಇತರರು: ಬಿ. ಬ್ರಹ್ಮಚಾರಿ (ವಿಜಯನಗರ), ಎಲ್. ಪುರುಷೋತ್ತಮ (ಶಿವಮೊಗ್ಗ), ಎನ್. ರಾಘವೇಂದ್ರ, ಡಿ.ಎಂ. ಪ್ರದೀಪ್‌ಕುಮಾರ್, ವಿಶ್ವೇಶ್ವರ ಪರ್ಕಳ (ಉಡುಪಿ) ಮತ್ತು ಕೆ.ಎಸ್. ಸ್ವಾತೀಶ್ (ಮಂಡ್ಯ).