Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಶಿಲ್ಪಕಲಾ ಅಕಾಡೆಮಿಯ 2024, 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ
Authored by:
Yallamma G
Date:
9 ಫೆಬ್ರುವರಿ 2026
➤ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಶಿಲ್ಪಕಲಾ ಕೃತಿಗಳ ಬಹುಮಾನ ಪ್ರಕಟಿಸಿದೆ.
➤ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ (ಸಂಪ್ರದಾಯ, ಸಮಕಾಲೀನ, ರಥ ಶಿಲ್ಪ ಇತ್ಯಾದಿ) ಸಾಧನೆ ಮಾಡಿದ ಕಲಾವಿದರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
=> ವಾರ್ಷಿಕ ಗೌರವ ಪ್ರಶಸ್ತಿ: ₹50,000 ನಗದು ಮತ್ತು ಪ್ರಶಸ್ತಿ ಫಲಕ.
=> ಶಿಲ್ಪಶ್ರೀ ಹಾಗೂ ದತ್ತಿ ಪ್ರಶಸ್ತಿಗಳು: ₹25,000 ನಗದು ಮತ್ತು ಪ್ರಶಸ್ತಿ ಫಲಕ.
=> ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.
➤
2024 ಸಾಲಿನ ‘ಗೌರವ ಪ್ರಶಸ್ತಿ’ ವಿಜೇತರು:
1. ಎ.ಪಿ. ಶ್ರೀಕಂಠಾಚಾರ್ಯ - ದಾವಣಗೆರೆ - ಸಂಪ್ರದಾಯ ಶಿಲ್ಪ
2. ಸಾಯಿನಾಥ ಭೀಮರಾಯಪ್ಪ - ಧಾರವಾಡ - ಸಂಪ್ರದಾಯ ಶಿಲ್ಪ
3. ಸೋಮಾಚಾರಿ - ಹಾವೇರಿ - ಸಂಪ್ರದಾಯ ಶಿಲ್ಪ
4. ರಾಜಬಾಬು - ಮೈಸೂರು - ಸಿಮೆಂಟ್ ಶಿಲ್ಪ
5.
ಎಂ.ಕೆ. ಗಿರೀಶ್ಕುಮಾರ್
-
ವಿಜಯನಗರ
- ಸಮಕಾಲೀನ ಶಿಲ್ಪ
➤
2025ನೇ '
ಗೌರವ ಪ್ರಶಸ್ತಿ’ ವಿಜೇತರು:
1.
ಕಲ್ಲಣ್ಣ ಸಾಯಬಣ್ಣ ಕಂಬಾರ -
ಕಲಬುರಗಿ -
ಸಂಪ್ರದಾಯ ಶಿಲ್ಪ
2. ಅರವಿಂದ ವಿ. ಬಡಿಗೇರ -
ರಾಯಚೂರು -
ರಥ ಶಿಲ್ಪ
3. ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ -
ಗದಗ -
ಸಂಪ್ರದಾಯ ಶಿಲ್ಪ
4. ಅರುಣ ಬುಕ್ಕಾ ಗುಡಿಗಾರ -
ಉತ್ತರ ಕನ್ನಡ -
ಸಂಪ್ರದಾಯ ಶಿಲ್ಪ
5. ಕೆ. ರಾಘವೇಂದ್ರ -
ಮೈಸೂರು -
ಸಮಕಾಲೀನ ಶಿಲ್ಪ
➤
2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿ ವಿಜೇತರು (10 ಸಾಧಕರು)
1. ಬಸ್ತಿ ಸದಾಶಿವ ಶೆಣೈ - ದಕ್ಷಿಣ ಕನ್ನಡ
2. ದೇವಿಪ್ರಸಾದ್ ಎಂ. ಮಾಯಾಚಾರ್ಯ - ಬಾಗಲಕೋಟೆ
3. ಮಂಜುನಾಥ ಡಿ. ಬಾರ್ಕಿ - ಹಾವೇರಿ
4. ರಾಜೇಶ್ ಎಂ. ಪತ್ತಾರ - ಗದಗ
5. ಆನಂದ ಹಾವನೂರು - ಬೆಳಗಾವಿ
6. ನವೀನ್ ಕಡ್ಲಾಸ್ಕರ್ - ಧಾರವಾಡ
7. ಕೆ.ಎನ್. ಕೃಷ್ಣಮೂರ್ತಿಚಾರ್ - ಚಿತ್ರದುರ್ಗ
8. ವಿಪಿನ್ ಭದೌರಿಯಾ - ಬೆಂಗಳೂರು
9. ಸಿ.ಪಿ. ವಿಶ್ವನಾಥ್ - ತುಮಕೂರು
10. ಎಂ. ಶರಣ್ - ಬೆಂಗಳೂರು ದಕ್ಷಿಣ
➤
ವಿಶೇಷ ದತ್ತಿ ಪ್ರಶಸ್ತಿಗಳು ಮತ್ತು ಕಲಾಕೃತಿಗಳು:
ಅಕಾಡೆಮಿಯು ಶಿಲ್ಪಕಲಾ ಪ್ರದರ್ಶನಕ್ಕಾಗಿ ಅತ್ಯುತ್ತಮ ಕಲಾಕೃತಿಗಳನ್ನು ಸಹ ಆಯ್ಕೆ ಮಾಡಿದೆ:
-
ರಾಮ್ಸನ್ಸ್ ಕಲಾ ಪ್ರತಿಷ್ಠಾನ ದತ್ತಿ ಪ್ರಶಸ್ತಿ:
ಈರಣ್ಣ, ರಾಯಚೂರು (ಕೃತಿ: ಸಗರನಾಡಿನ ಜಾನಪದ ಗ್ರಾಮದೇವತೆ).
-
ಮನೋಹರ ಕಾಳಪ್ಪ ಪತ್ತಾರ ದತ್ತಿ ಪ್ರಶಸ್ತಿ:
ಎಂ. ಬಡಿಗೇರ, ಕಲಬುರಗಿ (ಕೃತಿ: ವೃಷಭವಾಹನ ಶಿವ).
-
ತಲ್ಲೂರು ಫ್ಯಾಮಿಲಿ ಟ್ರಸ್ಟ್ ದತ್ತಿ ಪ್ರಶಸ್ತಿ:
ರೂಪ ಖಂಗೋವಿ, ಬೆಂಗಳೂರು ಮತ್ತು ಪಿ.ಎಸ್. ಕೃಷ್ಣಮೂರ್ತಿ.
-
ಅರೇನಾ ಅನಿಮೇಷನ್ ದತ್ತಿ ಪ್ರಶಸ್ತಿ:
ಆನಂದ ಬಿಳಗಿ, ಬಾಗಲಕೋಟೆ (ಕೃತಿ: ಅಭಿನವ ಶ್ರೀ - 3D ಪ್ರಿಂಟ್).
➤
ಅಕಾಡೆಮಿ ಬಹುಮಾನಕ್ಕೆ ಆಯ್ಕೆಯಾದ ಇತರರು:
ಬಿ. ಬ್ರಹ್ಮಚಾರಿ (ವಿಜಯನಗರ), ಎಲ್. ಪುರುಷೋತ್ತಮ (ಶಿವಮೊಗ್ಗ), ಎನ್. ರಾಘವೇಂದ್ರ, ಡಿ.ಎಂ. ಪ್ರದೀಪ್ಕುಮಾರ್, ವಿಶ್ವೇಶ್ವರ ಪರ್ಕಳ (ಉಡುಪಿ) ಮತ್ತು ಕೆ.ಎಸ್. ಸ್ವಾತೀಶ್ (ಮಂಡ್ಯ).
Take Quiz
Loading...