Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ದೇಶದ ಮೊದಲ 'ಗ್ರಾಹಕ ನ್ಯಾಯ 2026' ವರದಿ ಬಿಡುಗಡೆ: ಕರ್ನಾಟಕಕ್ಕೆ ದೇಶದಲ್ಲೇ 4ನೇ ಸ್ಥಾನ
Authored by:
Akshata Halli
Date:
21 ಮಾರ್ಚ್ 2026
➤
ಬೆಂಗಳೂರು:
ದೇಶದ ಪ್ರಥಮ
'ಗ್ರಾಹಕ ನ್ಯಾಯ 2026' (Consumer Justice 2026)
ಸಮೀಕ್ಷಾ ವರದಿಯಲ್ಲಿ ಕರ್ನಾಟಕ ರಾಜ್ಯವು ಗಮನಾರ್ಹ ಸಾಧನೆ ಮಾಡಿದ್ದು, ನಾಲ್ಕನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಭಾರತದಲ್ಲಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
➤
ಶ್ರೇಯಾಂಕದ ವಿವರ:
ಇಂಡಿಯಾ ಜಸ್ಟೀಸ್ ರಿಪೋರ್ಟ್' ಬಿಡುಗಡೆ ಮಾಡಿರುವ ಈ ಸಮೀಕ್ಷೆಯಲ್ಲಿ, ಗ್ರಾಹಕ ಸಂರಕ್ಷಣಾ ಕಾಯಿದೆ-2019ರ ಅಡಿಯಲ್ಲಿ ಶಾಸನಬದ್ಧ ಜವಾಬ್ದಾರಿಗಳನ್ನು ಸಮರ್ಥವಾಗಿ ಪೂರೈಸುತ್ತಿರುವ ರಾಜ್ಯಗಳನ್ನು ಪಟ್ಟಿ ಮಾಡಲಾಗಿದೆ.
ಮೊದಲ ನಾಲ್ಕು ಸ್ಥಾನಗಳು:
1.ಆಂಧ್ರಪ್ರದೇಶ (ಪ್ರಥಮ ಸ್ಥಾನ)
2.ಮಧ್ಯಪ್ರದೇಶ
3.ರಾಜಸ್ಥಾನ
4.ಕರ್ನಾಟಕ
➤
ಮೌಲ್ಯಮಾಪನದ ಮಾನದಂಡಗಳು :
ರಾಜ್ಯ ಮತ್ತು ಜಿಲ್ಲಾ ಗ್ರಾಹಕ ಆಯೋಗಗಳ ಕಾರ್ಯಕ್ಷಮತೆಯನ್ನು ಅಳೆಯಲು ಸರ್ಕಾರ ನೀಡುವ ಬಜೆಟ್ ಹಂಚಿಕೆ, ಕಚೇರಿಗಳ ಲಭ್ಯತೆ ಹಾಗೂ ಡಿಜಿಟಲೀಕರಣದಂತಹ ಮೂಲಸೌಕರ್ಯ, ನ್ಯಾಯಾಧೀಶರು ಮತ್ತು ಸಿಬ್ಬಂದಿಗಳ ನೇಮಕಾತಿಯನ್ನೊಳಗೊಂಡ ಮಾನವ ಸಂಪನ್ಮೂಲ ಹಾಗೂ ಗ್ರಾಹಕರ ದೂರುಗಳನ್ನು ತ್ವರಿತವಾಗಿ ಬಗೆಹರಿಸುವ ವ್ಯಾಜ್ಯಗಳ ವಿಲೇವಾರಿ ವೇಗವನ್ನು ಮುಖ್ಯ ಮಾನದಂಡಗಳಾಗಿ ಪರಿಗಣಿಸಲಾಗಿದೆ.
➤
ವರದಿ ಬಿಡುಗಡೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಸಂಜಯ್ ಕಿಶನ್ ಕೌಲ್
ಅವರು ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ. "ಕಾನೂನುಗಳು ಜಾರಿಯಾದಾಗ ಅವು ಕೇವಲ ಕಾಗದದ ಮೇಲೆ ಇರಬಾರದು, ಕಾರ್ಯರೂಪಕ್ಕೆ ಬರಬೇಕು. ಆದರೆ ಬಹುತೇಕ ಆಯೋಗಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಖಾಲಿ ಇರುವುದು ತ್ವರಿತ ನ್ಯಾಯದಾನಕ್ಕೆ ದೊಡ್ಡ ಅಡ್ಡಿಯಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
➤
ಈ ವರದಿಯ ಪ್ರಕಾರ, ನಗರ ಪ್ರದೇಶದ ಗ್ರಾಹಕ ವ್ಯಾಜ್ಯಗಳ ವಿಲೇವಾರಿಯಲ್ಲಿ ಬೆಂಗಳೂರು ತನ್ನ ಸಮಕಾಲೀನ ನಗರಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ. ತಾಂತ್ರಿಕ ಬಳಕೆ ಮತ್ತು ಇ-ಫೈಲಿಂಗ್ (E-filing) ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಗತಿ ಆಶಾದಾಯಕವಾಗಿದೆ.
Take Quiz
Loading...