Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕರ್ನಾಟಕ ಬಜೆಟ್ 2026-27: ಶಿಕ್ಷಣ, ವಸತಿ ಶಾಲೆ ಮತ್ತು ಕೌಶಲ್ಯಾಭಿವೃದ್ಧಿಗೆ ಬಂಪರ್ ಕೊಡುಗೆ!
Authored by:
Akshata Halli
Date:
7 ಮಾರ್ಚ್ 2026
➤
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಹಿಂದುಳಿದ ವರ್ಗಗಳ (BC) ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅನೇಕ ಹೊಸ ವಸತಿ ಶಾಲೆ ಮತ್ತು ಹಾಸ್ಟೆಲ್ಗಳ ಘೋಷಣೆ ಮಾಡಲಾಗಿದೆ.
➤
ಹೊಸ ವಸತಿ ಶಾಲೆ ಹಾಗೂ ಹಾಸ್ಟೆಲ್ಗಳ ಸ್ಥಾಪನೆ:
ವಿದ್ಯಾರ್ಥಿಗಳ ವಸತಿ ಸಮಸ್ಯೆ ನೀಗಿಸಲು ಸರ್ಕಾರವು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ:
- 40 ಹೊಸ ವಸತಿ ಶಾಲೆಗಳು:
SC, ST ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಒಟ್ಟು 40 ಹೊಸ ವಸತಿ ಶಾಲೆಗಳ ಪ್ರಾರಂಭ.
- ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್:
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ 10 ಹೊಸ ವಸತಿ ನಿಲಯಗಳ ಸ್ಥಾಪನೆ.
- ಮೆಟ್ರಿಕ್ ನಂತರದ ಹಾಸ್ಟೆಲ್ಗಳು:
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ 62 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ಗಳು ಹಾಗೂ ಪ್ರಮುಖ ನಗರಗಳಲ್ಲಿ ಹೆಚ್ಚುವರಿ 50 ಹಾಸ್ಟೆಲ್ಗಳ ಪ್ರಾರಂಭ.
- ಕ್ರೈಸ್ (KREIS) ವಸತಿ ಶಾಲೆ:
ಒಟ್ಟು 30 ಹೊಸ ಕಟ್ಟಡಗಳ ನಿರ್ಮಾಣ (SC-20, ST-5, BC-5).
➤
ಶೈಕ್ಷಣಿಕ ಸುಧಾರಣೆ ಮತ್ತು ಉಚಿತ ಸೌಲಭ್ಯಗಳು:
- ಪಿಯುಸಿವರೆಗೆ ಉಚಿತ ಪಠ್ಯಪುಸ್ತಕ:
ಪೂರ್ವ ಪ್ರಾಥಮಿಕದಿಂದ ಪಿಯುಸಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ.
- ಮೂಲಸೌಕರ್ಯಕ್ಕೆ ₹640 ಕೋಟಿ:
ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಬೃಹತ್ ಮೊತ್ತದ ಅನುದಾನ.
- ದೀಪಿಕಾ ವಿದ್ಯಾರ್ಥಿ ವೇತನ:
₹30,000 ಗಳ 'ದೀಪಿಕಾ' ವಿದ್ಯಾರ್ಥಿ ವೇತನ ಯೋಜನೆಯನ್ನು ಮುಂದುವರಿಸಲು ತೀರ್ಮಾನ.
- ವಿಜ್ಞಾನ ಮತ್ತು ತಂತ್ರಜ್ಞಾನ:
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳ ಸ್ಥಾಪನೆ.
➤
ಉನ್ನತ ಶಿಕ್ಷಣ ಮತ್ತು ಹೊಸ ಕೋರ್ಸ್ಗಳು:
- ತಾಂತ್ರಿಕ ಕೋರ್ಸ್ಗಳು:
11 ಪಾಲಿಟೆಕ್ನಿಕ್ ಮತ್ತು ಚಿತ್ರದುರ್ಗ ಇಂಜಿನಿಯರಿಂಗ್ ಕಾಲೇಜಿನಲ್ಲಿ AI (ಕೃತಕ ಬುದ್ಧಿಮತ್ತೆ), ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ 15 ಹೊಸ ಕೋರ್ಸ್ಗಳ ಆರಂಭ.
- ಹೊಸ ಕಾಲೇಜುಗಳು:
ಚಡಚಣ, ಬೆಳಗಾವಿ ಗ್ರಾಮಾಂತರ, ನರಸಿಂಹರಾಜ ಕ್ಷೇತ್ರ (ಮೈಸೂರು) ಮತ್ತು ಮಸ್ಕಿಯಲ್ಲಿ ಹೊಸ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆ.
- ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ (UVCE):
ಇದರ ಅಭಿವೃದ್ಧಿಗೆ ₹100 ಕೋಟಿ ಅನುದಾನ
➤
ಸಾಮಾಜಿಕ ನ್ಯಾಯ: 'ರೋಹಿತ್ ವೇಮುಲ ಕಾಯ್ದೆ' ಜಾರಿ:
ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರವು ಕಟ್ಟುನಿಟ್ಟಾದ 'ರೋಹಿತ್ ವೇಮುಲ ಕಾಯ್ದೆ'ಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗಲಿದೆ.
➤
ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ: ಕೆ-ಕ್ವೆಸ್ಟ್ (K-QUEST):
ಯುವಜನರ ಉದ್ಯೋಗಾವಕಾಶ ಹೆಚ್ಚಿಸಲು ₹1,386 ಕೋಟಿ ವೆಚ್ಚದಲ್ಲಿ ಕೆ-ಕ್ವೆಸ್ಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದು ಐಟಿಐ (ITI) ಮತ್ತು ತಾಂತ್ರಿಕ ಸಂಸ್ಥೆಗಳ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ ಹೊಂದಿದೆ.
Take Quiz
Loading...