* ರಾಜ್ಯದ 2025-26ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆಯನ್ನೂ ನೋಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 ಮಾರ್ಚ್ 08 ರಂದು ( ಶುಕ್ರವಾರ) ಮಂಡನೆ ಆರಂಭಿಸಿದ್ದಾರೆ. ಇದು ಅವರ ದಾಖಲೆಯ 16ನೇ ಬಜೆಟ್ ಆಗಿದ್ದು, ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು 4,09,549 ಕೋಟಿ ರೂ ದಾಖಲೆ ಗಾತ್ರದ ಬಜೆಟ್ ಮಂಡನೆ ಮಾಡುತ್ತಿದ್ದಾರೆ.* 4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ- 2025-26 ಸಾಲಿನಲ್ಲಿ ಪಂಚ ಗ್ಯಾರಂಟಿಗೆ 51,034 ಕೋಟಿ ರೂ. ಅನುದಾನ- ಬಂಡವಾಳ ವೆಚ್ಚ 26,474 ಕೋಟಿ ರೂ.- ರಾಜಸ್ವ ವೆಚ್ಚ ಅಂದಾಜು 3,11,739 ಕೋಟಿ ರೂ.- 19,262 ಕೋಟಿ ರೂ. ರಾಜಸ್ವ ಕೊರತೆಯ ಬಜೆಟ್ ಮಂಡನೆ- 1,16,000 ಕೋಟಿ ರೂ. ಸಾಲದ ಮೊರೆ- ಒಟ್ಟು ರಾಜಸ್ವ ಸ್ವೀಕೃತಿ ಅಂದಾಜು 2,92,477 ಕೋಟಿ ರೂ.- ಈ ಪೈಕಿ 2,08,100 ಕೋಟಿ ಸ್ವಂತ ತೆರಿಗೆ ಸಂಗ್ರಹದ ಗುರಿ* ಇಲಾಖೆ ಅನುದಾನ- ಶಿಕ್ಷಣ ಇಲಾಖೆ45, 286 ಕೋಟಿ- ಇಂಧನ 26, 896 ಕೋಟಿ- ನೀರಾವರಿ 22,181 ಕೋಟಿ- ಆರೋಗ್ಯ17, 473 ಕೋಟಿ- ಕಂದಾಯ 17, 201 ಕೋಟಿ- ಸಮಾಜ ಕಲ್ಯಾಣ 16, 955 ಕೋಟಿ* ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು ಎಂದು ಸಿಎಂಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.* ಎಸ್ಸಿ, ಎಸ್ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ.* ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ನಲ್ಲಿ ಮಲ್ಟಿಫೆಕ್ಸ್ನಲ್ಲಿ ಏಕರೂಪದ ಟಿಕೆಟ್ ದರ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಸಿನಿಮಾ ಟಿಕೆಟ್ ದರ 200 ರೂ. ಆಗಿರಲಿದೆ.* ಪ್ರಾಥಮಿಕ, ಫ್ರೌಡಾ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು, ಉಪನ್ಯಾಸರಿಗೆ 2 ಸಾವಿರ ಗೌರವ ಧನ ಹೆಚ್ಚಳ.* ಕರ್ನಾಟಕದಲ್ಲಿ ಹೊಸದಾಗಿ 500 ಪಬ್ಲಿಕ್ ಶಾಲೆಗಳು ಆರಂಭ. 50 ಪ್ರೌಢ ಶಾಲೆಗಳು ಉನ್ನತರೀಕರಣ ಮಾಡುವುದಾಗಿ ಕರ್ನಾಟಕ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇನ್ನೂ ಬೆಂಗಳೂರು ಟನಲ್ ರಸ್ತೆಗೆ 40 ಸಾವಿರ ಕೋಟಿ ರೂ. ಯೋಜನೆ ಹಂಚಿಕೆ ಮಾಡಿದ್ದಾರೆ.* ಶಾಲಾ ಮಕ್ಕಳಿಗೆ ಬಜೆಟ್ನಲ್ಲಿ ಸಿಹಿಸುದ್ದಿ. ಶಾಲಾ ಮಕ್ಕಳಿಗೆ ವಾರದ 6 ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲು ಘೋಷಣೆ ಮಾಡಲಾಗಿದೆ. ಇದಕ್ಕಾಗಿ 1,500 ಕೋಟಿ ರೂ. ಮೀಸಲಿಡಲಾಗುತ್ತದೆ ಎಂದು ಬಜೆಟ್ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.* ಬಜೆಟ್ 2025-26ರಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರು ಮಾಡುವ ಕಾರ್ಯಕರ್ತೆಯರ ಗೌರವ ಧವನ್ನು 1 ಸಾವಿರ ರೂ. ಏರಿಕೆ ಮಾಡಲಾಗಿದೆ.* ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ನಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನವನ್ನು 7 ಸಾವಿರ ಕೋಟಿ ರೂ.ಗಳಿಗೆ ಏರಿಕೆ ಮಾಡಿದ್ದಾರೆ. * 2024ರಲ್ಲಿ ರಾಜ್ಯ ಬಜೆಟ್ ಗಾತ್ರ 3,71,383 ಕೋಟಿ ರೂಪಾಯಿ ಆಗಿತ್ತು. ಈ ಬಾರಿ 4 ಲಕ್ಷ ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. 1 ಲಕ್ಷ ಕೋಟಿ ರೂಪಾಯಿವರೆಗೆ ರಾಜ್ಯದ ಸಾಲದ ಪ್ರಮಾಣವನ್ನು ವಿಸ್ತರಿಸುವ ನಿರೀಕ್ಷೆಯಿದೆ.* ಇ-ಜಮಾಬಂದಿ ತಂತ್ರಾಂಶ ಅಭಿವೃದ್ಧಿಪಡಿಸಿ ಪ್ರಸ್ತುತ ಸಾಲಿನಿಂದ ಜಾರಿ. ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಇ-ಪೌತಿ ಆಂದೋಲನ ಆರಂಭ. ಹೊಸದಾಗಿ ರಚನೆಯಾದ ತಾಲ್ಲೂಕುಗಳ ಪೈಕಿ 21 ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ.* ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆ ನಿಲ್ದಾಣ ಉನ್ನತೀಕರಣಯಡಿ ಖಾಸಗಿ ಸಹಭಾಗಿತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಉನ್ನತೀಕರಣ. ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಾಣ.* ರಾಜ್ಯದ ಆಯ್ದ 10 ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ. ಪ್ರವಾಸಿ ಮಿತ್ರರ ಸಂಖ್ಯೆ 1,000 ಕ್ಕೆ ಹೆಚ್ಚಳ ಹಾಗೂ 24X7 ಪ್ರವಾಸಿ ಸಹಾಯವಾಣಿ ತೆರೆಯಲು ಕ್ರಮ. ರಾಜ್ಯದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಸಂಗ್ರಹಿಸಲು ONE- TAC Digital Grid ಬಳಕೆ.* ಐತಿಹಾಸಿಕ ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೆ ಕ್ರಮ. ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡವನ್ನು ರಾಜ್ಯ ಮಟ್ಟದ ವಸ್ತುಸಂಗ್ರಹಾಲಯವಾಗಿ ಪರಿವರ್ತನೆ.* ಪತ್ರಕರ್ತರ ಮಾಸಾಶನ 15 ಸಾವಿರ ರೂ.ಗೆ ಹಾಗೂ ಕುಟುಂಬ ಮಾಸಾಶನ 7,500 ರೂ.ಗೆ ಹೆಚ್ಚಳ. ಮಾನ್ಯತೆ ಹೊಂದಿರುವ ಪತ್ರಕರ್ತರು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಅನುಷ್ಠಾನ.* ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಒಟಿಟಿ ವೇದಿಕೆ ಸೃಜಿಸಲು ಕ್ರಮ. ಮುಂದಿನ 3 ವರ್ಷಗಳ ಅವಧಿಯಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ. ಎಲ್ಲಾ ವಿಧದ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ.ಗೆ ಮಿತಿಗೊಳಿಸಲು ಕ್ರಮ.- ಕರ್ನಾಟಕ ಬಜೆಟ್ - 2025-26. ಸಿದ್ದರಾಮಯ್ಯ ಅವರ 16ನೇ ಬಜೆಟ್.ಇಡಿ ದೇಶದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರು.1) ವಜುಭಾಯ ವಾಲಾ - 18 (ಗುಜರಾತ್)2) ಸಿದ್ದರಾಮಯ್ಯ -16* ರಾಮಕೃಷ್ಣ ಹೆಗಡೆ - 13 ಬಜೆಟ್ ಮಂಡನೆ.