* ಪುಣೆಯ ಬಾಲಗಂಧರ್ವ ಸಂಗೀತ ರಸಿಕ ಮಂಡಳಿ ಕೊಡಮಾಡುವ ಪ್ರತಿಷ್ಠಿತ ‘ಕೊಹಿನೂರ್ ಗಂಧರ್ವ’ ಪ್ರಶಸ್ತಿಗೆ ಧಾರವಾಡದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಕೈವಲ್ಯ ಕುಮಾರ್ ಗುರವ ಆಯ್ಕೆಯಾಗಿದ್ದಾರೆ.* ಸಂಗೀತ ಮತ್ತು ನಾಟಕ ಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಕಲಾವಿದರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.* ಈ ಪುಣೆಯ ಮರಾಠಿ ಗಾಯಕ, ರಂಗ ನಟ, ಬಾಲ ಗಂಧರ್ವರ ಸ್ಮರಣೆಯಲ್ಲಿ 50 ವರ್ಷಗಳಿಂದ ಪ್ರಶಸ್ತಿ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಹೊರಗಿನ ಕಲಾವಿದರಿಗೆ ಪ್ರಶಸ್ತಿ ಘೋಷಿಸಲಾಗಿದೆ. * ಈ ಪ್ರಶಸ್ತಿಯು ₹ 1,11,111 ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.* ಮಂಡಳಿಯು ವಿದುಷಿ ಮಂಜೂಷಾ ಕುಲಕರ್ಣಿ ಪಾಟೀಲ ಅವರಿಗೆ ‘ಬಾಲಗಂಧರ್ವ ಗುಣಗೌರವ’ ಪುರಸ್ಕಾರವನ್ನೂ ಪ್ರಕಟಿಸಿದೆ. ಜುಲೈ 15ರಂದು ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.