* ಭಾರತ, ಪಶ್ಚಿಮ ಗಡಿಯಲ್ಲಿ ಪಾಕ್ ವಿರುದ್ಧ ಆಪರೇಷನ್ ಸಿಂದೂರದ ಮೂಲಕ ತೀವ್ರ ನಡೆ ವಹಿಸಿದ್ದರೆ, ಪೂರ್ವ ಗಡಿಯಲ್ಲೂ ತೀವ್ರ ಚಟುವಟಿಕೆ ಆರಂಭಿಸಿದೆ.* ತ್ರಿಪುರಾ ರಾಜ್ಯದ ಬಾಂಗ್ಲಾದೇಶ ಗಡಿಗೆ ಸನಿಹದಲ್ಲಿರುವ ಕೈಲಾಶಹರ್ ವಿಮಾನ ನಿಲ್ದಾಣವನ್ನು ಮರುಜೀವಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.* ಈ ವಿಮಾನ ನಿಲ್ದಾಣವು 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಪ್ರಸ್ತುತ ಇದು 30 ವರ್ಷಗಳಿಂದ ನಿಷ್ಕ್ರಿಯವಾಗಿದ್ದು, ಈಗ ಪುನಃ ಕಾರ್ಯನಿರತಗೊಳ್ಳಲಿದೆ. ಇದರ ಪುನರಾಭಿವೃದ್ಧಿಯಿಂದ ಗಡಿಭಾಗದಲ್ಲಿ ಸೇನೆ ಹಾಗೂ ಸರಕು ಚಲನವಲನ ಸುಲಭವಾಗಲಿದೆ.* ಇತ್ತ ಬಾಂಗ್ಲಾದೇಶದಲ್ಲಿರುವ ಲಾಲ್ಮೊನಿರ್ಹತ್ ವಾಯುನೆಲೆಯನ್ನು ಚೀನಾದ ನೆರವಿನಿಂದ ಪುನರ್ ನಿರ್ಮಿಸಲು ಬಾಂಗ್ಲಾ ಮುಂದಾಗಿದೆ.* ಈ ಸ್ಥಳವು ಭಾರತ ಗಡಿಯಿಂದ ಕೇವಲ 20 ಕಿ.ಮೀ. ದೂರದಲ್ಲಿದ್ದು, ಸಿಲಿಗುರಿ ಕಾರಿಡಾರ್ನಲ್ಲಿಯೇ ಇದೆ.* ಸಿಲಿಗುರಿ ಕಾರಿಡಾರ್ ಭಾರತದ ಈಶಾನ್ಯ ರಾಜ್ಯಗಳನ್ನು ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗ. ಈ ಭಾಗದಲ್ಲಿ ಚೀನಾ ಹಾಗೂ ಬಾಂಗ್ಲಾ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವುದು ಭಾರತಕ್ಕೆ ತೀವ್ರ ಕಳವಳ ತಂದಿದೆ.* ಈ ಹಿನ್ನೆಲೆಯಲ್ಲಿಯೇ ಭಾರತ ಕೈಲಾಶಹರ್ ವಿಮಾನ ನಿಲ್ದಾಣ ಪುನಶ್ಚೇತನಕ್ಕೆ ಭದ್ರತಾ ದೃಷ್ಟಿಯಿಂದ ಬಹುಮುಖ್ಯ ಹೆಜ್ಜೆಯಾಗಿ ಪರಿಗಣಿಸಲಾಗಿದೆ.